2ನೇ ಟೆಸ್ಟ್: 2ನೇ ದಿನದಾಟ ಅಂತ್ಯ; ಲಂಕಾ ಗೆಲುವಿಗೆ 447ರನ್ ಗುರಿ ನೀಡಿದ ಭಾರತ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದ್ದು, ಶ್ರೀಲಂಕಾ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದೆ.
Published: 14th March 2022 12:48 AM | Last Updated: 14th March 2022 12:48 AM | A+A A-

ಭಾರತ ತಂಡ
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದ್ದು, ಶ್ರೀಲಂಕಾ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಶ್ರೀಲಂಕಾ ಗೆಲುವಿಗೆ ಟೀಂ ಇಂಡಿಯಾ 447 ರನ್ ಗುರಿ ನೀಡಿದೆ.
ಇದನ್ನು ಓದಿ: ಭಾರತ-ಶ್ರೀಲಂಕಾ 2ನೇ ಟೆಸ್ಟ್: ಜಸ್ಪ್ರೀತ್ ಬೂಮ್ರಾಗೆ ಐದು ವಿಕೆಟ್, 109 ರನ್ ಗಳಿಗೆ ಲಂಕಾ ಆಲೌಟ್
ಶ್ರೀಲಂಕಾ ಇನ್ನೂ 419 ರನ್‌ಗಳ ಅಂತರದಲ್ಲಿದ್ದು, ಕುಶಾಲ್ ಮೆಂಡಿಸ್ 16 ಮತ್ತು ಶ್ರೀಲಂಕಾ ನಾಯಕ ದಿಮುತ್ ಕರುಣಾರತ್ನೆ ಅವರು 10 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾ ಎರಡನೇ ಇನ್ನಿಂಗ್ಸ್ ನ ಆರಂಭದಲ್ಲೇ ಆಘಾತ ಅನುಭವಿಸಿದ್ದು, ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಲಹಿರು ತಿರಿಮನ್ನೆ ಅವರನ್ನು ಔಟ್ ಮಾಡಿದರು. ಬುಮ್ರಾ ಒಳಗೆ ಬಂದ ಚೆಂಡು ತಿರಿಮನ್ನೆ ಅವರ ಪ್ಯಾಡ್‌ಗೆ ತಗುಲಿ ಎಲ್ ಬಿಡಬ್ಲ್ಯು ಆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ (50) ಹಾಗೂ ಶ್ರೇಯಸ್ ಅಯ್ಯರ್ (67) ಆಕರ್ಷಕ ಅರ್ಧಶತಕಗಳನ್ನು ಬಾರಿಸುವ ಮೂಲಕ ಭಾರತ ತಂಡಕ್ಕೆ ನೆರವಾದರು.