ನಾನು ಆಟ ಮುಂದುವರೆಸಲ್ಲ; ಪಿಚ್‌ನಲ್ಲೇ ಅಂಪೈರ್ ಜೊತೆ ಡೇವಿಡ್ ವಾರ್ನರ್ ಜಟಾಪಟಿ, ವಿಡಿಯೋ!
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವಿನ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಲಾಹೋರ್‌ನಲ್ಲಿ ನಡೆಯುತ್ತಿರುವಾಗ ಆಸ್ಟ್ರೇಲಿಯಾ ಆಟಗಾರರು ಹಾಗೂ ಅಂಪೈರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.
Published: 25th March 2022 03:13 PM | Last Updated: 25th March 2022 03:13 PM | A+A A-

ಡೇವಿಡ್ ವಾರ್ನರ್
ಲಾಹೋರ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವಿನ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಲಾಹೋರ್‌ನಲ್ಲಿ ನಡೆಯುತ್ತಿರುವಾಗ ಆಸ್ಟ್ರೇಲಿಯಾ ಆಟಗಾರರು ಹಾಗೂ ಅಂಪೈರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಪಂದ್ಯದ ನಾಲ್ಕನೇ ದಿನ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಫೀಲ್ಡ್ ಅಂಪೈರ್ ಜೊತೆ ಹಠಾತ್ತನೆ ವಾಗ್ವಾದಕ್ಕಿಳಿದರು. ಅಂಪೈರ್ ಮಾತಿಗೆ ಸಿಟ್ಟಾದ ವಾರ್ನರ್ ಪಂದ್ಯವನ್ನು ಮಧ್ಯದಲ್ಲಿ ನಿಲ್ಲಿಸಿಬಿಟ್ಟರು. ಕ್ರಿಕೆಟ್ ನಿಯಮಗಳ ಪುಸ್ತಕವನ್ನು ತೋರಿಸುವಂತೆ ಅಂಪೈರನನ್ನೇ ಕೇಳಿರುವ ಘಟನೆ ನಡೆಯಿತು..
ಈ ಘಟನೆಯು ಆಸ್ಟ್ರೇಲಿಯಾ ತಂಡದ ಎರಡನೇ ಇನಿಂಗ್ಸ್‌ನ 21 ನೇ ಓವರ್‌ನಲ್ಲಿ ಸಂಭವಿಸಿತು. ಅಂಪೈರ್‌ಗಳಾದ ಅಲೀಮ್ ದಾರ್ ಮತ್ತು ಎಹ್ಸಾನ್ ರಜಾ ಅವರು ಓವರ್‌ನ ಕೊನೆಯ ಎಸೆತದ ನಂತರ ಸ್ಟ್ರೈಕ್‌ನಲ್ಲಿದ್ದ ವಾರ್ನರ್ ನತ್ತ ಬಂದು, ಶಾಟ್ ಆಡಿದ ನಂತರ ಪಿಚ್‌ನ ಡೇಂಜರ್ ಏರಿಯಾಗೆ ಬರದಂತೆ ಎಚ್ಚರಿಕೆ ನೀಡಿದರು. ವಾಸ್ತವವಾಗಿ ವಾರ್ನರ್ ತಮ್ಮ ಕ್ರೀಸ್‌ನಿಂದ ಸ್ವಲ್ಪ ಮುಂದೆ ಪಿಚ್ ಕಡೆಗೆ ಬಂದಿದ್ದರು.
ಸ್ಟಂಪ್ ನಲ್ಲಿ ಅಳವಡಿಸಿದ್ದ ಮೈಕ್ ನಲ್ಲಿ ರಿಕಾರ್ಡ್
ವಾರ್ನರ್ ಅವರು ಅಂಪೈರ್‌ಗೆ ಕ್ರೀಸ್‌ನತ್ತ ತೋರಿಸುತ್ತಾ... 'ನೀವು ನನ್ನ ಶಾಟ್ ಅನ್ನು ಹೀಗೆ ಆಡಬೇಕೆಂದು ಬಯಸುತ್ತೀರಿ..' ಎಂದು ಕೇಳಿದಾಗ ಅಂಪೈರ್ ಅಹ್ಸಾನ್ ರಜಾ, 'ಹೌದು, ಶಾಟ್ ಆಡಿದ ಬಳಿಕ ನೀವು ರನ್ ಗಾಗಿ ಮುಂದಕ್ಕೆ ಹೋಗಬೇಕು' ಎಂದು ಹೇಳಿದರು. ಅಂಪೈರ್‌ನಿಂದ ಇದನ್ನು ಕೇಳಿದ ವಾರ್ನರ್ ಕೋಪಗೊಂಡು, 'ನಿಯಮ ಪುಸ್ತಕದಲ್ಲಿ ನನಗೆ ತೋರಿಸಿ… ಅದರಲ್ಲಿ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು. 'ನೀವು ನನಗೆ ತೋರಿಸುವವರೆಗೆ ಆಟವನ್ನು ಪ್ರಾರಂಭಿಸುವುದಿಲ್ಲ' ಎಂದು ಹೇಳಿದರು.
ಆದರೆ ಸ್ವಲ್ಪ ಹೊತ್ತು ಆಟ ಸ್ಥಗಿತಗೊಂಡ ಬಳಿಕ ಮತ್ತೆ ಪಂದ್ಯ ಆರಂಭವಾಯಿತು. ಈ ಸಂಪೂರ್ಣ ಚರ್ಚೆಯ ಸಮಯದಲ್ಲಿ, ಡೇವಿಡ್ ವಾರ್ನರ್ ಪಾಕಿಸ್ತಾನಿ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರೊಂದಿಗೆ ಮಾತನಾಡುತ್ತಿದ್ದರು. ಇಡೀ ವಿಷಯವನ್ನು ಬಗೆಹರಿಸಿದ ಬಳಿಕ ಮತ್ತೆ ಆಟ ಪ್ರಾರಂಭವಾಯಿತು.
David Warner vs Umpire Ahsan Raza.#DavidWarner #ahsanraza #PAKvAUS pic.twitter.com/BM815hyXVE
— Hafiz Ahmad Hassan (@HafizAh42405734) March 24, 2022