
ರಾಜಸ್ತಾನ ರಾಯಲ್ಸ್
ಮುಂಬೈ: 2022ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆದ ಪಂಜಾಬ್ ಕಿಂಗ್ಸ್ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಪೇರಿಸಿತ್ತು. ಜಾನಿ ಬ್ರೈಸ್ಟೋವ್ (56) ಮತ್ತು ಜಿತೇಶ್ ಶರ್ಮಾ ಅಜೇಯ 38 ರನ್ ಗಳ ಸಹಾಯದೊಂದಿಗೆ ಪಂಜಾಬ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
ಪಂಜಾಬ್ ನೀಡಿದ 190 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್ ತಂಡ 4 ವಿಕೆಟ್ ನಷ್ಟಕ್ಕೆ 190 ರನ್ ಪೇರಿಸುವ ಮೂಲಕ ಗೆಲುವಿನ ನಗೆ ಬೀರಿತು. ರಾಜಸ್ತಾನ ಪರ ಜೈಸ್ವಾಲ್ 68, ಜೋಸ್ ಬಟ್ಲರ್ 30, ಹೆಟ್ಮರ್ ಅಜೇಯ 31 ರನ್ ಪೇರಿಸಿದ್ದಾರೆ.
ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ರಾಜಸ್ತಾನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು 12 ಅಂಕ ಸಂಪಾದಿಸಿರುವ ಆರ್ ಸಿಬಿ ನಾಲ್ಕನೇ ಸ್ಥಾನದಲ್ಲಿದೆ.