ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ, ಸರಿಯಾಗಿ ನಡೆಸಿಕೊಳ್ಳಲಿಲ್ಲ; ಐಪಿಎಲ್ ವಿರುದ್ದ ಕ್ರಿಸ್ ಗೇಯ್ಲ್ ಅಸಮಾಧಾನ!!

ಹಾಲಿ ಐಪಿಎಲ್ ಟೂರ್ನಿಯಲ್ಲಿ ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ, ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ತಾವು ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿಲ್ಲ ಎಂದು ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published: 08th May 2022 05:08 PM  |   Last Updated: 08th May 2022 05:08 PM   |  A+A-


Chris Gayle

ಕ್ರಿಸ್ ಗೇಯ್ಲ್

PTI

ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ, ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ತಾವು ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿಲ್ಲ ಎಂದು ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಸೀಸನ್ 2022 ರಲ್ಲಿ ಅತಿ ದೊಡ್ಡ್ ಸ್ಟಾರ್ ಆಟಗಾರ ಮಿಸ್ ಆಗಿದ್ದು, ಅದು ಬೇರೆ ಯಾರೂ ಅಲ್ಲ ವಿಂಡೀಸ್ ದೈತ್ಯ ಕ್ರಿಸ್ ಗೇಲ್. ಚುಟುಕು ಪಂದ್ಯವಾದ ಐಪಿಎಲ್ ನಲ್ಲಿ ಅಬ್ಬರದ ಆಟವಾಡುತ್ತಾ ಕ್ರಿಕೆಟ್ ಪ್ರೇಮಿಗಳಿಗೆ ಫೇವರಿಟ್ ಆಗಿದ್ದ ಈ ಕ್ರಿಕೆಟಿಗನನ್ನು ಸೀಸಸ್ 15 ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೌಲರ್‌ಗಳನ್ನು ಭಯಭೀತಗೊಳಿಸಿದ ಗೇಲ್, ಐಪಿಎಲ್ ಪಂದ್ಯಾವಳಿಯ ಇತಿಹಾಸದ ಅತಿರಥ- ಮಹಾರಥರ ಪೈಕಿ ಒಬ್ಬರು. ಆದಾಗ್ಯೂ, ಅವರು ಈ ವರ್ಷದ ಐಪಿಎಲ್ ಆವೃತ್ತಿಯ ಮೊದಲು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ.  

ಇದನ್ನೂ ಓದಿ: ಐಪಿಎಲ್ 2022; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ; ಬೌಲರ್‌ಗೆ ಕೋವಿಡ್ ಸೋಂಕು, ಕ್ವಾರಂಟೈನ್

ಈಗ ಅವರು ಐಪಿಎಲ್ 2022 ಅನ್ನು ಏಕೆ ಆಡದಿರಲು ನಿರ್ಧರಿಸಿದರು ಎಂಬುದರ ಕುರಿತು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಗೇಲ್ ಅವರು ಐಪಿಎಲ್‌ನ ಕೊನೆಯ ಕೆಲವು ಸೀಸನ್‌ಗಳಲ್ಲಿ ತನಗೆ ಸರಿಯಾದ ಗೌರವ ಸಿಗಲಿಲ್ಲ. ನನ್ನನ್ನು ಪರಿಗಣಿಸಲ್ಪಟ್ಟ ರೀತಿಗೆ ಸಮಾಧಾನವಿರಲಿಲ್ಲ ಎಂದು ಹೇಳಿದ್ದಾರೆ.

“ಕ್ರೀಡೆಗಾಗಿ ಮತ್ತು ಐಪಿಎಲ್‌ಗಾಗಿ ತುಂಬಾ ಮಾಡಿದ ನಂತರವೂ ನನಗೆ ಅರ್ಹವಾದ ಗೌರವ ಸಿಗಲಿಲ್ಲ. ಹಾಗಾಗಿ ನಾನು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಹಾಗೇ ಬಿಟ್ಟುಬಿಡೋಣ ಎಂದು ನಿರ್ಧರಿಸಿದೆ ಎಂದು ಯುಕೆಯ ಮಿರರ್ ಪತ್ರಿಕೆಗೆ ಕ್ರಿಸ್ ಗೇಯ್ಲ್ ಹೇಳಿದ್ದಾರೆ.

ಆದಾಗ್ಯೂ, ಮುಂದಿನ ಋತುವಿನಲ್ಲಿ ಐಪಿಎಲ್ ಲೀಗ್‌ಗೆ ಮರಳುವುದನ್ನು ಅವರು ತಳ್ಳಿಹಾಕಲಿಲ್ಲ. ಮುಂದಿನ ವರ್ಷ ನಾನು ಹಿಂತಿರುಗುತ್ತೇನೆ, ಅವರಿಗೆ ನಾನು ಬೇಕು ಎಂದು ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಇತ್ತೀಚೆಗೆ ಪಂಜಾಬ್ ಕಿಂಗ್ಸ್ ಪರ ಆಡಿರುವ ವೆಸ್ಟ್ ಇಂಡೀಸ್ ಐಕಾನ್ ಕ್ರಿಸ್ ಗೇಲ್ ಹೇಳಿದರು.

ಇದನ್ನೂ ಓದಿ: ಐಪಿಎಲ್ 2022: ಲಖನೌ ವಿರುದ್ಧ ಕೋಲ್ಕತ್ತಾಗೆ ಹೀನಾಯ ಸೋಲು!

ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 142 ಪಂದ್ಯಗಳನ್ನು ಆಡಿದ್ದಾರೆ ಮತ್ತು ದಾಖಲೆಯ ಆರು ಶತಕಗಳು ಸೇರಿದಂತೆ 4965 ರನ್ ಗಳಿಸಿದ್ದಾರೆ. ಅವರು 148.96 ಸ್ಟ್ರೈಕ್ ರೇಟ್‌ನೊಂದಿಗೆ 39.72 ಸರಾಸರಿ ಹೊಂದಿದ್ದಾರೆ. ಅಂತೆಯೇ ಗೇಯ್ಲ್ ಐಪಿಎಲ್‌ನಲ್ಲಿ ದಾಖಲೆಯ ಆರು ಶತಕಗಳನ್ನು ಹೊಂದಿದ್ದಾರೆ ಮತ್ತು 2013 ರಲ್ಲಿ ಆರ್ ಸಿಬಿ ಗಾಗಿ ಪುಣೆ ವಾರಿಯರ್ಸ್ ವಿರುದ್ಧ 175* ರನ್ ಗಳಿಸಿರುವ ದಾಖಲೆಯನ್ನ ಇದುವರೆಗೂ ಯಾರೂ ಐಪಿಎಲ್ ನಲ್ಲಿ ಸರಿಗಟ್ಟಲು ಸಾಧ್ಯವಾಗಿಲ್ಲ.
 


Stay up to date on all the latest ಕ್ರಿಕೆಟ್ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp