
ಲಖನೌ ಸೂಪರ್ಗೈಂಟ್ಸ್
ಪುಣೆ: 2022ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ಗೈಂಟ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಹೀನಾಯ ಸೋಲು ಅನುಭವಿಸಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಖನೌ ಸೂಪರ್ಗೈಂಟ್ಸ್ 7 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತ್ತು. ಲಖನೌ ನೀಡಿದ 177 ರನ್ ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ 101 ರನ್ ಗಳಿಗೆ ಆಲೌಟ್ ಆಗಿದ್ದು 75 ರನ್ ಗಳಿಂದ ಸೋಲು ಅನುಭವಿಸಿದೆ.
ಲಖನೌ ಪರ ಡಿಕಾಕ್ 50, ದೀಪಕ್ ಹೂಡಾ 41, ಸ್ಟೋಯ್ನಿಸ್ 28 ರನ್ ಬಾರಿಸಿದ್ದಾರೆ.
ರಸೆಲ್ 45, ಸುನಿಲ್ ನರೈನ್ 2 ಮತ್ತು ಫಿಂಚ್ 14 ರನ್ ಬಾರಿಸಿದ್ದಾರೆ. ಲಖನೌ ಪರ ಅವೇಶ್ ಖಾನ್ ಮತ್ತು ಹೋಲ್ಡರ್ ತಲಾ 3 ವಿಕೆಟ್ ಪಡೆದಿದ್ದಾರೆ.