ಆರ್ಸಿಬಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ!
ಐಪಿಎಲ್ 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನ ನೀಡುತ್ತಿರುವ ಹಿಂದಿನ ಗುಟ್ಟನ್ನು ಭಾರತ ತಂಡದ ನಾಯಕ ಮತ್ತು ಕೋಚ್ ಆಗಿದ್ದ ರವಿಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.
Published: 08th May 2022 09:22 PM | Last Updated: 09th May 2022 01:23 PM | A+A A-

ಸಂಭ್ರಮದಲ್ಲಿರುವ ಆರ್ ಸಿಬಿ ಆಟಗಾರರ ಚಿತ್ರ
ಮುಂಬೈ: ಐಪಿಎಲ್ 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನ ನೀಡುತ್ತಿರುವ ಹಿಂದಿನ ಗುಟ್ಟನ್ನು ಭಾರತ ತಂಡದ ನಾಯಕ ಮತ್ತು ಕೋಚ್ ಆಗಿದ್ದ ರವಿಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.
ವಿಭಿನ್ನ ಸಂದರ್ಭಗಳಲ್ಲಿ ತಂಡದ ವಿಭಿನ್ನ ಆಟಗಾರರು ಗೆಲುವಿಗೆ ಕಾರಣರಾಗಿದ್ದಾರೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ತಂಡವು ಇನ್ನು ಮುಂದೆ ಆಯ್ದ ಆಟಗಾರರ ಮೇಲೆ ಅವಲಂಬಿತ ಆಗಿಲ್ಲ ಎಂದು ತಿಳಿಸಿದ್ದಾರೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್ಸಿಬಿ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಐಪಿಎಲ್ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಲೈವ್ನಲ್ಲಿ ಶಾಸ್ತ್ರಿ, ಆರ್ಸಿಬಿ ತಂಡದ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ. ಚೆನ್ನೈ ವಿರುದ್ಧದ ಗೆಲುವು ಅವರ ನೈತಿಕತೆಯನ್ನು ಹೆಚ್ಚಿಸಿದೆ. ಅವರ ಡ್ರೆಸ್ಸಿಂಗ್ ರೂಮ್ ಮೊದಲಿಗಿಂತ ಉತ್ತಮವಾಗಿದೆ. ಆರ್ಸಿಬಿ ಆಟಗಾರರು ಆತ್ಮವಿಶ್ವಾಸದಿಂದ ಕೂಡಿದೆ. ಆಟಗರಾರ ಮನಸ್ಥಿತಿಯೂ ಈಗ ಬದಲಾಗಿದೆ. ಏಕೆಂದರೆ ಸರಿಯಾದ ಸಮಯದಲ್ಲಿ ಸರಿಯಾದ ಆಟಗಾರ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಐಪಿಎಲ್ 2022: ಹೈದರಾಬಾದ್ ವಿರುದ್ಧ ಆರ್ ಸಿಬಿಗೆ 67 ರನ್ ಗಳ ಭರ್ಜರಿ ಜಯ!
ಆರ್ಸಿಬಿ ಈಗ ಸಮತೋಲಿತ ತಂಡವಾಗಿದ್ದು, ಅದಕ್ಕಾಗಿಯೇ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಸದ್ಯಕ್ಕೆ ಆರ್ಸಿಬಿ ಬ್ಯಾಲೆನ್ಸ್ ತುಂಬಾ ಚೆನ್ನಾಗಿದೆ. ಹಿಂದೆ ನಡೆದಿದ್ದ ಐಪಿಎಲ್ ಟೂರ್ನಿಗಳಲ್ಲಿ ಇದು ಕಾಣಿಸಿರಲಿಲ್ಲ. ಈ ಮೊದಲು ತಂಡವು ವಿರಾಟ್ ಕೊಹ್ಲಿ ಅಥವಾ ಎಬಿ ಡಿವಿಲಿಯರ್ಸ್ನಂತಹ ಆಯ್ದ ಆಟಗಾರರನ್ನು ಅವಲಂಬಿಸಿತ್ತು. ಆದರೆ ಈ ವರ್ಷ ಚಿತ್ರಣ ವಿಭಿನ್ನವಾಗಿದ್ದು, ಅವರಿಗೆ ಸಾಕಷ್ಟು ಬೌಲಿಂಗ್ ಆಯ್ಕೆಗಳಿವೆ ಎಂದು ತಿಳಿಸಿದರು.
ಇಂಗ್ಲೆಂಡ್ನ ಮಾಜಿ ನಾಯಕ ಗ್ರೇಮ್ ಸ್ವಾನ್ ಕೂಡ ಆರ್ಸಿಬಿ ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಈ ತಂಡ (ಆರ್ಸಿಬಿ) ಉತ್ತಮ ಆಟಗಾರರಿಂದ ತುಂಬಿದೆ. ಅವರ ಬ್ಯಾಟ್ಸ್ಮನ್ಗಳನ್ನು ಬೆಂಬಲಿಸಿದರೆ ಮತ್ತು ಮೊದಲ ನಾಲ್ಕು ಬ್ಯಾಟ್ಸ್ಮನ್ಗಳಲ್ಲಿ ಯಾರಾದರೂ 70-80 ರನ್ ಗಳಿಸಿದರೆ, ಅವರು ಯಾರನ್ನಾದರೂ ಸೋಲಿಸಬಹುದು. ಅವರ ಮೊದಲ ನಾಲ್ಕು ಬ್ಯಾಟ್ಸ್ಮನ್ಗಳು ಉತ್ತಮವಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.