ಐಪಿಎಲ್ 2022: ಧೋನಿ ನಾಯಕನಾದ ಬೆನ್ನಲ್ಲೆ ಗೆಲುವಿನ ಲಯಕ್ಕೆ ಮರಳಿದ ಸಿಎಸ್ ಕೆ; ಡೆಲ್ಲಿ ವಿರುದ್ಧ ಭರ್ಜರಿ ಜಯ!
2022ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ 91 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
Published: 09th May 2022 12:40 AM | Last Updated: 09th May 2022 01:24 PM | A+A A-

ಚೆನ್ನೈ ಸೂಪರ್ ಕಿಂಗ್ಸ್
ಮುಂಬೈ: 2022ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ 91 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಪೇರಿಸಿತು. 209 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 117 ರನ್ ಗಳಿಗೆ ಆಲೌಟ್ ಆಯಿತು.
ಚೆನ್ನೈ ಸೂಪರ್ ಕಿಂಗ್ಸ್ ಪರ ರಿತುರಾಜ್ ಗಾಯಕ್ವಾಡ್ 41, ಕಾನ್ವೇ 87, ಶಿವಂ ದುಬೆ 32, ಎಂಎಸ್ ಧೋನಿ ಅಜೇಯ 21 ರನ್ ಬಾರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಡೇವಿಡ್ ವಾರ್ನರ್ 19, ಮಿಚೆಲ್ ಮಾರ್ಷ್ 25, ರಿಷಬ್ ಪಂತ್ 21 ರನ್ ಪೇರಿಸಿದ್ದಾರೆ.