ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ: ಟೀಕಾಕಾರರ ಬಾಯಿ ಮುಚ್ಚಿಸಲು ಕೊಹ್ಲಿ ಕಂಡುಕೊಂಡಿರುವ ಮಾರ್ಗವೇನು ಗೊತ್ತ?

ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು ಅವರನ್ನು ಟೀಕಿಸುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಇಂತಹ ಟೀಕಾಕಾರರ ಬಾಯಿ ಮುಚ್ಚಿಸಲು ಕೊಹ್ಲಿ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. 

Published: 11th May 2022 07:58 PM  |   Last Updated: 11th May 2022 07:59 PM   |  A+A-


ಕೊಹ್ಲಿ

AFP

ನವದೆಹಲಿ: ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು ಅವರನ್ನು ಟೀಕಿಸುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಇಂತಹ ಟೀಕಾಕಾರರ ಬಾಯಿ ಮುಚ್ಚಿಸಲು ಕೊಹ್ಲಿ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. 

33 ವರ್ಷದ ಭಾರತ ತಂಡದ ಮಾಜಿ ನಾಯಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಇನ್ನು 2022ರ ಐಪಿಎಲ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಅವರು ಮೂರನೇ ಬಾರಿಗೆ ಗೋಲ್ಡನ್ ಡಕ್‌ಗೆ ಆಗಿದ್ದು ಇದು ಅವರು ಕಟು ಟೀಕೆಗಳಿಗೆ ಗುರಿಯಾಗುವಂತೆ ಮಾಡಿದೆ.

ಟೀಕಾರರು ಅತ್ಯುತ್ತಮ ಬ್ಯಾಟರ್ ಆಗಿದ್ದ ಕೊಹ್ಲಿಯನ್ನು 'ಅತಿಯಾಗಿ ಬೇಯಿಸಿದಂತೆ' ಕಾಣುತ್ತಿದ್ದು ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ಇಂತಹ ಟೀಕೆಗಳಿಗೆ ಬೆಂಗಳೂರಿನ ವೆಬ್‌ಸೈಟ್‌ ವೊಂದಕ್ಕೆ ನೀಡಿದ ಲಘು ಸಂದರ್ಶನದಲ್ಲಿ  ಟೀಕಾಕಾರರ ಬಾಯಿ ಮುಚ್ಚಿಸುವ ಮಾರ್ಗ ಕಂಡುಕೊಂಡಿರುವುದಾಗಿ ಹೇಳಿದ್ದಾರೆ.

ಟೀಕಾಕಾರರು ನನ್ನ ಬೂಟುಗಳಲ್ಲಿ ಇರಲು ಸಾಧ್ಯವಿಲ್ಲ, ನನ್ನ ಭಾವನೆಗಳನ್ನು ಅನುಭವಿಸಲು ಸಾಧ್ಯವಿಲ್ಲ, ನನ್ನ ಜೀವನವನ್ನು ಬದುಕಲು ಸಾಧ್ಯವಿಲ್ಲ, ಆ ಕ್ಷಣಗಳನ್ನು ಬದುಕಲು ಸಾಧ್ಯವಿಲ್ಲ ಎಂದು ಕೊಹ್ಲಿ ತಮ್ಮ ವಿರುದ್ಧ ಬರೆಯಲು ಪ್ರಯತ್ನಿಸುತ್ತಿರುವ ಟೀಕಾಕಾರರ ಕುರಿತು ಹೇಳಿದರು.

ನೀವು ಈ ರೀತಿಯ ಮಾತುಗಳನ್ನು ಕೇಳುವುದನ್ನು ತಡೆಯಲು ಏನು ಮಾಡಿದ್ದೀರಿ? ಎಂಬ ಪ್ರಶ್ನೆಗೆ ನಾನು ಟಿವಿ ಮ್ಯೂಟ್ ಮಾಡುತ್ತೀನಿ. ಜನರು ಮಾತುಗಳಿಗೆ ಗಮನ ಕೊಡುವುದಿಲ್ಲ. ಈ ಎರಡೂ ಕೆಲಸಗಳನ್ನು ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಕೊಹ್ಲಿ ಈಗ ಎಲ್ಲಾ ಮಾದರಿಗಳಲ್ಲಿ 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಶತಕ ಗಳಿಸಲು ವಿಫಲರಾಗಿದ್ದಾರೆ. ಈ ಋತುವಿನ ಐಪಿಎಲ್‌ನಲ್ಲಿ 12 ಪಂದ್ಯಗಳಿಂದ ಕೇವಲ 216 ರನ್‌ ಗಳಿಸಿದ್ದು, ಒಂದು ಅರ್ಧಶತಕ ಮಾತ್ರ ಸಿಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಈ ಋತುವಿನಲ್ಲಿ ಬೆಂಗಳೂರು ತಂಡದ ನಾಯಕರಾಗಿದ್ದು ಪ್ರಸ್ತುತ 10 ತಂಡಗಳ ಟಿ20 ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇಆಫ್ ಸ್ಥಾನಕ್ಕಾಗಿ ಶ್ರಮಿಸುತ್ತಿದ್ದಾರೆ.


Stay up to date on all the latest ಕ್ರಿಕೆಟ್ news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp