ಬಿಸಿಸಿಐ ಅನ್ನು ಬಿಜೆಪಿ ಸರ್ಕಾರ ನಡೆಸುತ್ತಿದೆ: ಪಿಸಿಬಿ ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಜೆಪಿ ಸರ್ಕಾರದ ಅಧೀನದಲ್ಲಿದ್ದು ಬಿಸಿಸಿಐ ನೊಂದಿಗೆ ಸಂವಹನ ನಡೆಸುವುದು ಸುಲಭವಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ ಗಂಭೀರ ಆರೋಪ ಮಾಡಿದ್ದಾರೆ.
Published: 13th May 2022 01:08 AM | Last Updated: 13th May 2022 01:08 AM | A+A A-

ಜಯ್ ಶಾ-ಗಂಗೂಲಿ-ಎಹ್ಸಾನ್ ಮಣಿ
ಇಸ್ಲಾಮಾಬಾದ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಜೆಪಿ ಸರ್ಕಾರದ ಅಧೀನದಲ್ಲಿದ್ದು ಬಿಸಿಸಿಐ ನೊಂದಿಗೆ ಸಂವಹನ ನಡೆಸುವುದು ಸುಲಭವಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯು ಈ ಸಮಯದಲ್ಲಿ ಬಿಸಿಸಿಐ ಅನ್ನು ನಡೆಸುತ್ತಿದೆ. ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಇದ್ದರೂ. ಬಿಸಿಸಿಐ ಕಾರ್ಯದರ್ಶಿ ಯಾರು ಗೊತ್ತಾ? ಜೈ ಶಾ, ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರ ಮಗ. ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಬಿಜೆಪಿ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ. ನಿಜವಾದ ನಿಯಂತ್ರಣವು ಆ ಜನರ ಮೇಲಿದೆ. ಅವರು ಬಿಸಿಸಿಐ ಅನ್ನು ನಡೆಸುತ್ತಿದ್ದಾರೆ.
ಅದಕ್ಕಾಗಿಯೇ ನಾನು ಭಾರತೀಯ ಮಂಡಳಿಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಸುಧಾರಿಸದಿರಲು ಇದೇ ಕಾರಣ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿ 2012-13ರಲ್ಲಿ ನಡೆದಿತ್ತು. ಅಂದಿನಿಂದ, ಎರಡೂ ದೇಶಗಳು ಐಸಿಸಿ ಈವೆಂಟ್‌ಗಳು ಮತ್ತು ಏಷ್ಯಾ ಕಪ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಭಾರತದೊಂದಿಗೆ ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಆಡಲು ಸಿದ್ಧವಾಗಿದೆ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದರು.
ನಾವು ಭಾರತದ ಹಿಂದೆ ಹೋಗುವ ಅಗತ್ಯವಿಲ್ಲ. ನಾವೇಕೆ ಅವರ ಹಿಂದೆ ಹೋಗಬೇಕು? ಅವರು ಆಟವಾಡಲು ಬಯಸಿದರೆ, ಅವರು ಬಂದು ಆಡಬಹುದು ಎಂದರು.