ದಕ್ಷಿಣ ಅಫ್ರಿಕಾ ಟೂರ್ನಿಗೆ ರೋಹಿತ್, ಪಂತ್, ರಾಹುಲ್, ಬುಮ್ರಾಗೆ ವಿಶ್ರಾಂತಿ; ಧವನ್, ಪಾಂಡ್ಯಾ ನಡುವೆ ನಾಯಕತ್ವ ಪೈಪೋಟಿ!!
ಐಪಿಎಲ್ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಟೂರ್ನಿಗೆ ಸಜ್ಜಾಗಲಿದ್ದು, ಈ ಸರಣಿಯಿಂದ ರೋಹಿತ್ ಶರ್ಮಾ, ರಿಷಬ್ ಪಂತ್, ಕೆಎಲ್ ರಾಹುಲ್, ಜಸ್ ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.
Published: 15th May 2022 12:11 AM | Last Updated: 15th May 2022 12:11 AM | A+A A-

ಸಂಗ್ರಹ ಚಿತ್ರ
ನವದೆಹಲಿ: ಐಪಿಎಲ್ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಟೂರ್ನಿಗೆ ಸಜ್ಜಾಗಲಿದ್ದು, ಈ ಸರಣಿಯಿಂದ ರೋಹಿತ್ ಶರ್ಮಾ, ರಿಷಬ್ ಪಂತ್, ಕೆಎಲ್ ರಾಹುಲ್, ಜಸ್ ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.
ಈ ಬೆಳವಣೆಗೆ ಬೆನ್ನಲ್ಲೇ ಭಾರತ ತಂಡದಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು, ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಪ್ರಮುಖವಾಗಿ ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯಾ ನಡುವೆ ನಾಯಕತ್ವ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.
ಹಾಲಿ ಐಪಿಎಲ್ -15 ರಲ್ಲಿ ಗುಜರಾತ್ ಟೈಟನ್ಸ್ಗೆ ನಾಯಕತ್ವದ ಮೂಲಕ ಎಲ್ಲರನ್ನೂ ಮೆಚ್ಚಿಸಿರುವ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ದಕ್ಷಿಣ ಆಫ್ರಿಕಾ ಮತ್ತು ಎರಡು ಪಂದ್ಯಗಳ ಐರ್ಲೆಂಡ್ ವಿರುದ್ಧ ಟಿ20 ಸರಣಿ ಎರಡಕ್ಕೂ ನಾಯಕತ್ವ ಆಯ್ಕೆ ಪರಿಗಣಿಸಲಾಗುತ್ತಿದೆ. ಜೂನ್ 9 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಫ್ರಿಕಾ ವಿರುದ್ಧ ಸರಣಿ ಪ್ರಾರಂಭವಾಗಲಿದ್ದು, ಉಳಿದ ಪಂದ್ಯಗಳು ಕ್ರಮವಾಗಿ ಕಟಕ್, ವಿಶಾಖಪಟ್ಟಣಂ, ರಾಜ್ಕೋಟ್ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ.
ಮುಂಬೈನಲ್ಲಿ ನಡೆಯಲಿರುವ ಐಪಿಎಲ್ನ ಈ ಆವೃತ್ತಿಯ ಲೀಗ್ ಹಂತದ ಕೊನೆಯ ದಿನವಾದ ಮೇ 22 ರಂದು ದಕ್ಷಿಣ ಆಫ್ರಿಕಾ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಕೊಹ್ಲಿಗೆ ವಿರಾಮ
ಇನ್ನು ಹಾಲಿ ಐಪಿಎಲ್ ಟೂರ್ನಿಯಲ್ಲಿ ಮೂರು ಭಾರಿ ಡಕೌಟ್ ಆಗಿ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಗೂ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು, ಈ ಕುರಿತು ಈಗಾಗಲೇ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ಜುಲೈ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದ್ದು, ಈ ಟೂರ್ನಿಗೆ ಕೊಹ್ಲಿ ಫಿಟ್ ಆಗಬೇಕಿರುವ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕೊಹ್ಲಿ ಅವರನ್ನು ಕೈಬಿಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಈ ಕುರಿತು ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, 'ಭಾರತದ ಎಲ್ಲಾ ಹಿರಿಯ ಆಟಗಾರರು ಕನಿಷ್ಠ ಮೂರೂವರೆ ವಾರಗಳ ಸಂಪೂರ್ಣ ವಿಶ್ರಾಂತಿ ಪಡೆಯಲಿದ್ದಾರೆ. ಪ್ರಮುಖವಾಗಿ ರೋಹಿತ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಜಸ್ಪ್ರಿತ್ ಬುಮ್ರಾ ಎಲ್ಲರೂ ವೈಟ್-ಬಾಲ್ ಸರಣಿಯ ನಂತರ 'ಐದನೇ ಟೆಸ್ಟ್'ಗಾಗಿ ನೇರವಾಗಿ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ, ಎಲ್ಲಾ ಹಿರಿಯ ಎಲ್ಲಾ-ಫಾರ್ಮ್ಯಾಟ್ ಆಟಗಾರರು ಮುಂದಿನ ಏಳು T20 ಅಂತಾರಾಷ್ಟ್ರೀಯ ಪಂದ್ಯಗಳ ಭಾಗವಾಗಿರುವುದಿಲ್ಲ ಎನ್ನಲಾಗಿದೆ.
ಅಂತೆಯೇ ಆಫ್ರಿಕಾ ಮತ್ತು ಐರ್ಲೆಂಡ್ ಟೂರ್ನಿಗೆ ನಾಯಕತ್ವ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು, 'ಆಯ್ಕೆದಾರರಿಗೆ ಒಂದೆರಡು ಆಯ್ಕೆಗಳಿವೆ. ಶಿಖರ್ ಧವನ್, ಕಳೆದ ವರ್ಷದ ಶ್ರೀಲಂಕಾ ಸರಣಿಯಲ್ಲಿ ವಿರಾಟ್, ರೋಹಿತ್ ಮತ್ತು ರಾಹುಲ್ ಅನುಪಸ್ಥಿತಿಯಲ್ಲಿ ಈಗಾಗಲೇ ನಾಯಕತ್ವ ವಹಿಸಿದ್ದಾರೆ. ಆದರೆ ಹಾಲಿ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ಗೆ ಹಾರ್ದಿಕ್ ಪಾಂಡ್ಯ ಅವರ ಪ್ರಭಾವಶಾಲಿ ನಾಯಕತ್ವ ಪರಿಣಾಮ ಬೀರಿದೆ. ಆದ್ದರಿಂದ ಇದು ನಿಕಟ ಕರೆಯಾಗಿದ್ದು, ಧವನ್ ಮತ್ತು ಪಾಂಡ್ಯಾ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದಿದೆ.