ಐಪಿಎಲ್ 2022: ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 17 ರನ್ ಗಳ ರೋಚಕ ಜಯ, ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿತ

ಹಾಲಿ ಐಪಿಎಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 17 ರನ್ ಗಳ ರೋಚಕ ಜಯ ದಾಖಲಿಸಿದೆ.

Published: 17th May 2022 12:16 AM  |   Last Updated: 17th May 2022 12:16 AM   |  A+A-


Delhi Capitals won by 17 runs

ಡೆಲ್ಲಿಗೆ ಜಯ

Online Desk

ಮುಂಬೈ: ಹಾಲಿ ಐಪಿಎಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 17 ರನ್ ಗಳ ರೋಚಕ ಜಯ ದಾಖಲಿಸಿದೆ.

ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಿಚೆಲ್ ಮಾರ್ಷ್ (63 ರನ್) ಮತ್ತು ಸರ್ಫರಾಜ್ ಖಾನ್ (32 ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169ರನ್ ಕಲೆಹಾಕಿತು. ಪಂಜಾಬ್ ಪರ ಲಿವಿಂಗ್ ಸ್ಟೋನ್ ಮತ್ತು ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಕಬಳಿಸಿದರೆ, ರಬಾಡಾ 1 ವಿಕೆಟ್ ಕಬಳಿಸಿದರು.

ಡೆಲ್ಲಿ ನೀಡಿದ 170ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆಯಿತಾದರೂ ಅದೇ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲವಾಯಿತು. ಆರಂಭಿಕರಾದ ಜಾನಿ ಬೇರ್ ಸ್ಟೋ (28ರನ್) ಮತ್ತು ಶಿಖರ್ ಧವನ್ (19 ರನ್) ಗಳಿಸಿ ನಿರ್ಗಮಿಸಿದರು. ಬಳಿಕ ಪಂಜಾಬ್ ನ ಮಧ್ಯಮ ಕ್ರಮಾಂಕ ಅಕ್ಷರಶಃ ಕುಸಿಯಿತು. ರಾಜಪಕ್ಸ (4ರನ್), ಲಿವಿಂಗ್ ಸ್ಟೋನ್ (3 ರನ್) ಮತ್ತು ಮಯಾಂಕ್ ಅಗರ್ವಾಲ್ ಶೂನ್ಯ ಸುತ್ತಿದರು. ಈ ಹಂತದಲ್ಲಿ ಡೆಲ್ಲಿ ಬೌಲರ್ ಗಳು ಮೇಲುಗೈ ಸಾಧಿಸಿದರು. ಈ ವೇಳೆ ಪಂಜಾಬ್ ಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ (44 ರನ್) ಆಸರೆಯಾಗಿ ನಿಂತರಾದರೂ ಅವರಿಗೆ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. ಬ್ರಾರ್ 1 ರನ್ ಗಳಿಸಿ ಔಟಾದರೆ, ರಿಷಿ ಧವನ್ 4ರನ್ ಗಳಿಸಿ ಅಕ್ಸರ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. 

ಕಾಗಿಸೋ ರಬಾಡಾ 6ರನ್ ಗಳಿಸಿದರೆ, ಇದೇ ಹೊತ್ತಿನಲ್ಲಿ ಜಿತೇಶ್ ಶರ್ಮಾ ಔಟಾದರು. ರಬಾಡಾ ಕೂಡ ಔಟಾದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 17ರನ್ ಗಳ ಅಂತರದಲ್ಲಿ ಸೋಲು ಅನುಭವಿಸಿತು. ಡೆಲ್ಲಿ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
 
4ನೇ ಸ್ಥಾನಕ್ಕೇರಿದ ಡೆಲ್ಲಿ; ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿತ
ಈ ಗೆಲುವಿನೊಂದಿಗೆ ರಿಷಭ್ ಪಂತ್ ಬಳಗವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಅಲ್ಲದೆ ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅತ್ತ ಡೆಲ್ಲಿ ಜಯದಿಂದಾಗಿ ನಾಲ್ಕನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದನೇ ಸ್ಥಾನಕ್ಕೆ ತಳ್ಳಿದೆ. ರನ್ ರೇಟ್ ಲೆಕ್ಕಾಚಾರದಲ್ಲಿಯೂ ಆರ್‌ಸಿಬಿ ಹಿಂದೆ ಬಿದ್ದಿದೆ. 
 


Stay up to date on all the latest ಕ್ರಿಕೆಟ್ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp