ಐಪಿಎಲ್ 2022: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಗೆ ವಿರೋಚಿತ ಜಯ
ಹಾಲಿ ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಪಂದ್ಯ ದಾಖಲಾಗಿದ್ದು, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 2 ರನ್ ಗಳ ವಿರೋಚಿತ ಜಯ ದಾಖಲಿಸಿದೆ.
Published: 18th May 2022 11:55 PM | Last Updated: 18th May 2022 11:55 PM | A+A A-

ಲಖನೌ ಸೂಪರ್ ಜೈಂಟ್ಸ್ ಗೆ ವಿರೋಚಿತ ಜಯ
ಮುಂಬೈ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಪಂದ್ಯ ದಾಖಲಾಗಿದ್ದು, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 2 ರನ್ ಗಳ ವಿರೋಚಿತ ಜಯ ದಾಖಲಿಸಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 2 ರನ್ ಗಳ ವಿರೋಚಿತ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಕ್ವಿಂಟನ್ ಡಿ ಕಾಕ್ (140 ರನ್) ಮತ್ತು ಕೆಎಲ್ ರಾಹುಲ್ (68 ರನ್) ಅಮೋಘ ಬ್ಯಾಟಿಂಗ್ ನೆರವಿನಿಂದ 211 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಡಿ ಕಾಕ್ ಮತ್ತು ರಾಹುಲ್ ಬ್ಯಾಟಿಂಗ್ ಅಬ್ಬರಕ್ಕೆ ಅಕ್ಷರಶಃ ಕೋಲ್ಕತಾ ಬೌಲರ್ ಗಳು ಹೈರಾಣಾದರು.
WHAT. A. GAME !!@LucknowIPL clinch a thriller by 2 runs.
— IndianPremierLeague (@IPL) May 18, 2022
Scorecard - https://t.co/NbhFO1ozC7 #KKRvLSG #TATAIPL pic.twitter.com/7AkXzwfeYk
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ಕೇವಲ 2 ರನ್ ಗಳ ಅಂತರದ ವಿರೋಚಿತ ಸೋಲು ಕಂಡಿತು, ಕೇವಲ 9 ರನ್ ಗಳ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೋಲ್ಕತಾ ತಂಡಕ್ಕೆ ನಿತೀಶ್ ರಾಣಾ (42 ರನ್) ಮತ್ತು ಶ್ರೇಯಸ್ ಅಯ್ಯರ್ (60 ರನ್) ಮತ್ತೆ ಗೆಲುವಿನ ಆಸೆ ಚಿಗುರಿಸಿದರು. ಈ ಹಂತದಲ್ಲಿ ನಿತೀಶ್ ರಾಣಾ ಮತ್ತು ಶ್ರೇಯಸ್ ಅಯ್ಯರ್ ವಿಕೆಟ್ ಮತ್ತೆ ಲಖನೌ ತಂಡವನ್ನು ಹಳಿ ಮರಳಿಸಿತು.
ಆದರೆ ಈ ಹಂತದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ (36 ರನ್) ಕೋಲ್ಕತಾ ಇನ್ನಿಂಗ್ಸ್ ಗೆ ಜೀವ ತುಂಬಿದರು. ಇದೇ ಹೊತ್ತಿನಲ್ಲಿ ಆ್ಯಂಡ್ರೆ ರಸೆಲ್ ವಿಕೆಟ್ ಕೈ ಚೆಲ್ಲಿದರು. ಅಂತಿಮ ಹಂತದಲ್ಲಿ ರಿಂಕು ಸಿಂಗ್ (40ರನ್) ಮತ್ತು ಸುನಿಲ್ ನರೇನ್ (21 ರನ್) ಗೆಲುವಿಗಾಗಿ ಹರಸಾಹಸ ಪಟ್ಟರೂ, ಕೋಲ್ಕತಾ ತಂಡ ಕೇವಲ 2ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಅಂತಿಮವಾಗಿ ಲಖನೌ ತಂಡ ಗೆಲುವಿನ ನಗೆ ಬೀರಿತು.