ಐಪಿಲ್ 2022: ಮತ್ತೊಂದು ಅಪರೂಪದ ದಾಖಲೆ ಬರೆದ ಕೆಎಲ್ ರಾಹುಲ್; ಸತತ 5ನೇ ಆವೃತ್ತಿಯಲ್ಲಿ 500 ರನ್ ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ರನ್ ನಾಗಾಲೋಟ ಮುಂದುವರೆದಿದ್ದು, ಸತತ ಐದನೇ ಆವೃತ್ತಿಯಲ್ಲೂ ರಾಹುಲ್ 500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
Published: 19th May 2022 08:22 PM | Last Updated: 20th May 2022 12:55 PM | A+A A-

ಕೆಎಲ್ ರಾಹುಲ್
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ರನ್ ನಾಗಾಲೋಟ ಮುಂದುವರೆದಿದ್ದು, ಸತತ ಐದನೇ ಆವೃತ್ತಿಯಲ್ಲೂ ರಾಹುಲ್ 500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಐರ್ಲೆಂಡ್ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಬದಲು ಟೀಂ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಕೋಚ್
ಆ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ನೂತನ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ಬುಧವಾರ ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (68*) ಗಳಿಸಿದರು.
500 runs in IPL for @klrahul for the fifth straight season. Becomes the first Indian player to achieve this feat.#TATAIPL pic.twitter.com/Pt9XaJFdBt
— IndianPremierLeague (@IPL) May 18, 2022
ಅಲ್ಲದೆ ಕ್ವಿಂಟನ್ ಡಿ ಕಾಕ್ ಜೊತೆ ಮುರಿಯದ ಮೊದಲ ವಿಕೆಟ್ಗೆ ದಾಖಲೆಯ ದ್ವಿಶತಕದ (210) ಜೊತೆಯಾಟದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ದಾಖಲೆ ಬರೆದ ಡಿ ಕಾಕ್-ರಾಹುಲ್ ಜೋಡಿ; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಆರಂಭಿಕ ಜೊತೆಯಾಟ!
ಆ ಮೂಲಕ ಹಾಲಿ ಟೂರ್ನಿಯಲ್ಲೂ 500ರನ್ ಗಳ ಸಾಧನೆಗೆ ಪಾತ್ರರಾದರು. 2018ರಲ್ಲಿ ಪಂಜಾಬ್ ಕಿಂಗ್ಸ್ ಪರ ರಾಹುಲ್ 659 ರನ್ ಗಳಿಸಿದ್ದರು. 2019ರಲ್ಲಿ 593 ರನ್ ಪೇರಿಸಿದ್ದರು. 2020ರಲ್ಲಿ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದರು. 2021ರಲ್ಲೂ 616 ರನ್ ಕಲೆ ಹಾಕಿದ್ದರು. ಈ ಮೂಲಕ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ 2022: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಗೆ ವಿರೋಚಿತ ಜಯ
ಐಪಿಎಲ್ ಟೂರ್ನಿಗಳಲ್ಲಿ ಕೆ.ಎಲ್. ರಾಹುಲ್ ಒಟ್ಟು 108 ಪಂದ್ಯ ಗಳ ಪೈಕಿ 99 ಇನ್ನಿಂಗ್ಸ್ ಆಡಿದ್ದು, 47.62 ಸರಾಸರಿಯಲ್ಲಿ 136.22 ಸ್ಟ್ರೈಕ್ರೇಟ್ ನೊಂದಿಗೆ ಒಟ್ಟು 3810 ರನ್ ಕಲೆಹಾಕಿದ್ದಾರೆ. ಈ ಪೈಕಿ ಒಟ್ಟು 4 ಶತಕ ಮತ್ತು 30 ಅರ್ಧಶತಕಗಳು ಸೇರಿವೆ. ಒಟ್ಟು 159 ಸಿಕ್ಸರ್ ಮತ್ತು 324 ಬೌಂಡರಿಗಳನ್ನು ಸಿಡಿಸಿದ್ದಾರೆ. 19 ಪಂದ್ಯಗಳಲ್ಲಿ ರಾಹುಲ್ ಅಜೇಯ ಆಟವಾಡಿದ್ದು, ಅವರ ವೈಯುಕ್ತಿಕ ಗರಿಷ್ಠ ಸ್ಕೋರ್ 132 ರನ್ ಆಗಿದೆ.