ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ನ್ಯೂಜಿಲೆಂಡ್‍ನ ಗ್ರೆಗ್ ಬಾರ್ಕ್ಲೇ ಆಯ್ಕೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಗ್ರೆಗ್ ಬಾರ್ಕ್ಲೇ
ಗ್ರೆಗ್ ಬಾರ್ಕ್ಲೇ

ಮೆಲ್ಬರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

ಶನಿವಾರ ಮೆಲ್ಬೋರ್ನ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಬಾರ್ಕ್ಲೇ ಎದುರಾಳಿಯಾಗಿದ್ದ ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ಡಾ. ತವೆಂಗ್ವಾ ಮುಕುಹ್ಲಾನಿ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟ್‌ ನ ಮಾಜಿ ಮುಖ್ಯಸ್ಥ ಬಾರ್ಕ್ಲೇ ಈಗ ತನ್ನ ಎರಡನೇ ಅವಧಿಯನ್ನು ಇನ್ನೂ ಎರಡು ವರ್ಷಗಳ ಕಾಲ ನಿರ್ವಹಿಸಲಿದ್ದಾರೆ.

ಐಸಿಸಿ ಬೋರ್ಡ್ ಸದಸ್ಯರ ಒಮ್ಮತದ ಆಯ್ಕೆಯಾಗಿ ಎರಡನೇ ಬಾರಿ ಗ್ರೆಗ್ ಬಾರ್ಕ್ಲೇ ಆಯ್ಕೆಯಾದರು. ಈ ಮೂಲಕ 2020ರ ಬಳಿಕ 2022ರಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ 2 ವರ್ಷಗಳ ಅಧಿಕಾರವಧಿಯನ್ನು ಹಿಡಿದಿದ್ದಾರೆ. 2024ರ ವರೆಗೆ ಗ್ರೆಗ್ ಬಾರ್ಕ್ಲೇ ಅಧ್ಯಕ್ಷರಾಗಿರಲಿದ್ದಾರೆ.

2015ರ ಐಸಿಸಿ ಏಕದಿನ ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್‍ನ ಡೈರೆಕ್ಷರ್ ಆಗಿ ಕೆಲಸ ಮಾಡಿದ್ದ ಗ್ರೆಗ್ ಬಾರ್ಕ್ಲೇ, ನಾರ್ಥನ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್‍ನ ಸದಸ್ಯರು ಆಗಿದ್ದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನ ಹಲವು ಕಂಪನಿಗಳಲ್ಲಿ ಬೋರ್ಡ್‍ನ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಇವರಿಗಿದೆ. ಇದೀಗ ಎರಡನೇ ಬಾರಿ ಐಸಿಸಿಯ ಅಧ್ಯಕ್ಷರಾಗಿ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com