ಆ್ಯಶಸ್ ಬಳಿಕ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ: ಆಸಿಸ್ ಸ್ಟಾರ್ ಬ್ಯಾಟರ್ ವಾರ್ನರ್ ಸುಳಿವು!
ಮುಂದಿನ ವರ್ಷ ನಡೆಯಲಿರುವ ಆ್ಯಶಸ್ ಸರಣಿಯ ಬಳಿಕ ತಾವು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಕುರಿತು ಆಸ್ಟ್ರೇಲಿಯಾ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಸುಳಿವು ನೀಡಿದ್ದಾರೆ.
Published: 14th November 2022 12:57 PM | Last Updated: 14th November 2022 12:57 PM | A+A A-

ಡೇವಿಡ್ ವಾರ್ನರ್
ಸಿಡ್ನಿ: ಮುಂದಿನ ವರ್ಷ ನಡೆಯಲಿರುವ ಆ್ಯಶಸ್ ಸರಣಿಯ ಬಳಿಕ ತಾವು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಕುರಿತು ಆಸ್ಟ್ರೇಲಿಯಾ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಸುಳಿವು ನೀಡಿದ್ದಾರೆ.
ಹೌದು.. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆ್ಯಶಸ್ ಸರಣಿಯ ನಂತರ ಟೆಸ್ಟ್ ಕ್ರಿಕೆಟ್ ತ್ಯಜಿಸುವುದಾಗಿ ಸುಳಿವು ನೀಡಿದ್ದಾರೆ. ಆದರೆ ಕನಿಷ್ಠ 2024 ಟ್ವೆಂಟಿ-20 ವಿಶ್ವಕಪ್ ವರೆಗೆ ವೈಟ್-ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ವಾರ್ನರ್ ಯೋಜಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಮುಂದೆ ಮುಗ್ಗರಿಸಿದ ಪಾಕ್: ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಜೋಸ್ ಬಟ್ಲರ್ ಪಡೆ!
ನಿನ್ನೆ ಮುಕ್ತಾಯವಾದ ಟಿ2 ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡ ಸೆಮೀಸ್ ಹಂತಕ್ಕೆ ಏರುವುದಲ್ಲಿ ವಿಫಲವಾಗಿತ್ತು. ಪ್ರಮುಖವಾಗಿ ಇಡೀ ಟೂರ್ನಿ ತಂಡದ ಸ್ಫೋಟಕ ಬ್ಯಾಟರ್ ವಾರ್ನರ್ ನಿರಾಶಾದಾಯಕವಾಗಿತ್ತು. ಇದೇ ವಿಚಾರವಾಗಿ ಟ್ರಿಪಲ್ ಎಂ ಡೆಡ್‌ಸೆಟ್ ಲೆಜೆಂಡ್ಸ್ ಶೋನಲ್ಲಿ ಮಾತನಾಡಿರುವ ವಾರ್ನರ್ ಅವರು, 'ಟೆಸ್ಟ್ ಕ್ರಿಕೆಟ್ ನಿಂದ ಬಹುಶಃ ದೂರ ಉಳಿಯಬಹುದು. 2024 ರಲ್ಲಿ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಮುಂದಿನ ವರ್ಷ ನಡೆಯಲಿದ್ದು, ಸಂಭಾವ್ಯವಾಗಿ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ನನ್ನ ಕೊನೆಯ 12 ತಿಂಗಳಾಗಿರಬಹುದು. ಆದರೆ ನಾನು ವೈಟ್-ಬಾಲ್ ಆಟವನ್ನು ಪ್ರೀತಿಸುತ್ತೇನೆ; ಇದು ಅದ್ಭುತವಾಗಿದೆ' ಎಂದು ಹೇಳಿದ್ದಾರೆ.
ಮುಂದಿನ ವರ್ಷ ಆಸ್ಟ್ರೇಲಿಯಾದ ಟೆಸ್ಟ್ ವೇಳಾಪಟ್ಟಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ಪ್ರವಾಸಗಳಿದ್ದು, ವಾರ್ನರ್ ಅವರು ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಮರಳಲಿದ್ದಾರೆ. ಅಂತೆಯೇ ವೆಸ್ಟ್ ಇಂಡೀಸ್ ಮತ್ತು ಅಮೆರಿಕ 2024 ರಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಸಹ-ಆತಿಥ್ಯ ವಹಿಸುತ್ತಿವೆ. ಮುಂದಿನ ವರ್ಷ 36 ವರ್ಷಕ್ಕೆ ಕಾಲಿಟ್ಟಾಗ ಆಸ್ಟ್ರೇಲಿಯಾ ವಾರ್ನರ್ ಮತ್ತು ಸಹ ಆಟಗಾರ ಉಸ್ಮಾನ್ ಖವಾಜಾ ಅವರು ನಿವೃತ್ತರಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಸ್ವಲ್ಪದರಲ್ಲೇ ಪಾರಾದ ಮ್ಯಾಕ್ಸ್‌ವೆಲ್: ಕಾಲಿಗೆ ಶಸ್ತ್ರಚಿಕಿತ್ಸೆ!
ತವರಿನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್ ಪ್ರದರ್ಶನ ಕಳಪೆಯಾಗಿತ್ತು. ಆಫ್ಘಾನಿಸ್ತಾನ ವಿರುದ್ಧ ಅವರ 25 ರನ್ ಗಳಿಕೆಯೇ ಇಡೀ ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ ಆಗಿತ್ತು.
ಇನ್ನು ಆಸ್ಟ್ರೇಲಿಯಾವು ವೆಸ್ಟ್ ಇಂಡೀಸ್‌ನೊಂದಿಗೆ ನವೆಂಬರ್ 30 ರಂದು ಪ್ರಾರಂಭವಾಗುವ ಎರಡು-ಟೆಸ್ಟ್ ಸರಣಿಯಲ್ಲಿ ಆಡಲಿದೆ. ಮೂರು ಟೆಸ್ಟ್‌ಗಳು ಮತ್ತು ಸಮಾನ ಸಂಖ್ಯೆಯ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾಗೆ ಬರಲಿದೆ.