ನಾಯಕತ್ವ ಬಿಟ್ಟು ಬ್ಯಾಟಿಂಗ್ ಕಡೆ ಗಮನ ಹರಿಸು: ಪಾಕ್ ನಾಯಕನಿಗೆ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಸಲಹೆ!
2022ರ ಟಿ20 ವಿಶ್ವಕಪ್‌ನ ಫೈನಲ್ ಗೆ ಪ್ರವೇಶಿಸಿದ್ದ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಗಳಿಂದ ಸೋಲು ಕಂಡಿತ್ತು. ಇದಾದ ನಂತರ ಹಲವು ಆಟಗಾರರು ಪಾಕ್ ನಾಯಕನಿಗೆ ನಾಯಕತ್ವ ತ್ಯಜಿಸುವಂತೆ ಸಲಹೆಗಳನ್ನು ನೀಡುತ್ತಿದ್ದಾರೆ.
Published: 17th November 2022 08:46 PM | Last Updated: 17th November 2022 08:46 PM | A+A A-

ಬಾಬರ್ ಅಜಮ್
ಇಸ್ಲಾಮಾಬಾದ್: 2022ರ ಟಿ20 ವಿಶ್ವಕಪ್‌ನ ಫೈನಲ್ ಗೆ ಪ್ರವೇಶಿಸಿದ್ದ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಗಳಿಂದ ಸೋಲು ಕಂಡಿತ್ತು. ಇದಾದ ನಂತರ ಹಲವು ಆಟಗಾರರು ಪಾಕ್ ನಾಯಕನಿಗೆ ನಾಯಕತ್ವ ತ್ಯಜಿಸುವಂತೆ ಸಲಹೆಗಳನ್ನು ನೀಡುತ್ತಿದ್ದಾರೆ.
ಪಾಕಿಸ್ತಾನದ ಮಾಜಿ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಹೊರತುಪಡಿಸಿ, ಅನೇಕ ಪಾಕ್ ಆಟಗಾರರು ಬಾಬರ್ ಅಜಮ್‌ಗೆ ನಾಯಕತ್ವವನ್ನು ತೊರೆಯುವಂತೆ ಸಲಹೆ ನೀಡುತ್ತಿದ್ದು ಇದೀಗ ಈ ಸಾಲಿಗೆ ಮಾಜಿ ನಾಯಕ ಶಾಹಿದ್ ಅಫ್ರಿದಿ ಸೇರಿದ್ದಾರೆ.
ಬಾಬರ್ ಅಜಮ್ ನಾಯಕತ್ವ ತ್ಯಜಿಸುವುದು ಒಳ್ಳೆಯದ್ದು
ವಾಸ್ತವವಾಗಿ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಬಾಬರ್ ಅಜಮ್ ಗೆ ನಾಯಕತ್ವ ಬಿಟ್ಟು ಬ್ಯಾಟಿಂಗ್‌ನತ್ತ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ. ಬಾಬರ್ ಅಜಮ್ ಹೊರತುಪಡಿಸಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವ ವಹಿಸಲು ಅನೇಕ ಆಟಗಾರರಿದ್ದಾರೆ. ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ ಮತ್ತು ಶಾನ್ ಮಸೂದ್ ಅವರಂತಹ ಆಟಗಾರರು ಈ ತಂಡದ ನಾಯಕತ್ವದ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ, ಬಾಬರ್ ಅಜಮ್ ನಾಯಕತ್ವವನ್ನು ತೊರೆದು ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸದ ಬಾಬರ್ ಅಜಮ್
ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ T20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲನುಭವಿಸಬೇಕಾಯಿತು. ಅದೇ ಸಮಯದಲ್ಲಿ, ಈ ಪಂದ್ಯಾವಳಿಯುದ್ದಕ್ಕೂ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಕಳಪೆ ಬ್ಯಾಟಿಂಗ್ ಫಾರ್ಮ್ ಹೊಂದಿದ್ದರು. ವಾಸ್ತವವಾಗಿ ನಾಯಕತ್ವದ ಒತ್ತಡದಿಂದಾಗಿ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ ಎಂದು ಅನೇಕ ಮಾಜಿ ಆಟಗಾರರು ಹೇಳಿದ್ದಾರೆ.