3ನೇ ಟಿ20: ಸಿರಾಜ್, ಅರ್ಷ್ ದೀಪ್ ಸಿಂಗ್ ಮಾರಕ ಬೌಲಿಂಗ್, 160 ರನ್ ಗಳಿಗೆ ನ್ಯೂಜಿಲೆಂಡ್ ಆಲೌಟ್!

ಭಾರತದ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 160ರನ್ ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 161ರನ್ ಗಳ ಸವಾಲಿನ ಗುರಿ ನೀಡಿದೆ.
ಕಿವೀಸ್ ವಿರುದ್ಧ ಭಾರತ ಬೌಲಿಂಗ್ ಪಾರಮ್ಯ
ಕಿವೀಸ್ ವಿರುದ್ಧ ಭಾರತ ಬೌಲಿಂಗ್ ಪಾರಮ್ಯ

ನೇಪಿಯರ್: ಭಾರತದ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 160ರನ್ ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 161ರನ್ ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಡೆವಾನ್ ಕಾನ್ವೇ (59 ರನ್) ಮತ್ತು ಗ್ಲೇನ್ ಫಿಲಿಪ್ಸ್ (54) ಅಮೋಘ ಅರ್ಧಶತಕಗಳ ನೆರವಿನಿಂದ ಭಾರತಕ್ಕೆ ಸವಾಲಿನ ಗುರಿ ನೀಡಿದೆ. ಆರಂಭಿಕ ಆಘಾತದ ಹೊರತಾಗಿಯೂ ಡೆವಾನ್ ಕಾನ್ವೇ ಮತ್ತು ಗ್ಲೇನ್ ಫಿಲಿಪ್ಸ್ ನ್ಯೂಜಿಲೆಂಡ್ ಗೆ ಉತ್ತಮ ಚೇತರಿಕೆ ನೀಡಿದರು. ಈ ಜೋಡಿ 3ನೇ ವಿಕೆಟ್ ಜೊತೆಯಾಟದಲ್ಲಿ ಬರೊಬ್ಬರಿ 86 ರನ್ ಗಳ ಜೊತೆಯಾಟವಾಡಿತು.

ಆದರೆ ಈ ಹಂತದಲ್ಲಿ ದಾಳಿಗಿಳಿದ ಭಾರತದ ಮಹಮದ್ ಸಿರಾಜ್ ಕಿವೀಸ್ ಪಡೆಗೆ ಡಬಲ್ ಆಘಾತ ನೀಡಿದರು. ಅರ್ಧಶತಕ ಗಳಿಸಿ ಕ್ರೀನ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಗ್ಸೇನ್ ಫಿಲಿಪ್ಸ್ ರನ್ನು ಸಿರಾಜ್ ಪೆವಿಲಿಯನ್ ಗೆ ಅಟ್ಟಿದರು. ಇವರ ಬೆನ್ನಲ್ಲೇ ಕಾನ್ವೇ ಅವರನ್ನೂ ಕೂಡ ಅರ್ಷ್ ದೀಪ್ ಸಿಂಗ್ ಔಟ್ ಮಾಡಿದರು.

ಇವರಿಬ್ಬರು ಔಟಾದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡ ದಿಡೀರ್ ಕುಸಿತಕಂಡಿತು. ಒಂದು ಹಂತದಲ್ಲಿ 130ರನ್ ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆ ಮುಂದಿನ 30 ರನ್ ಗಳ ಅಂತರದಲ್ಲಿ 8 ವಿಕೆಟ್  ಕಳೆದುಕೊಂಡಿತು. ಮಹಮಜ್ ಸಿರಾಜ್ ಮತ್ತು ಅರ್ಷ್ ದೀಪ್ ಸಿಂಗ್ ತಲಾ 4 ವಿಕೆಟ್ ಪಡೆದು ನ್ಯೂಜಿಲೆಂಡ್ ದಿಢೀಕ್ ಕುಸಿತಕ್ಕೆ ಕಾರಣರಾದರು. ಅಂತಿಮವಾಗಿ ಕಿವೀಸ್ ಪಡೆ 19.4 ಓವರ್ ನಲ್ಲಿ 160ರನ್ ಗಳಿಸಿ ಆಲೌಟ್ ಆಯಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com