3ನೇ ಬಾರಿಗೆ 200+ ಜೊತೆಯಾಟ, ಟೇಲರ್, ಗಪ್ಟಿಲ್, ವಿಲಿಯಮ್ಸನ್ ಹಿಂದಿಕ್ಕಿದ ಟಾಮ್ ಲಾಥಮ್!

ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಯ ಶತಕ ಸಿಡಿಸಿದ ಕಿವೀಸ್ ಪಡೆಯ ಟಾಮ್ ಲಾಥಮ್ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಅಪೂರ್ವ ದಾಖಲೆಗೆ ಸಾಕ್ಷಿಯಾಗಿದ್ದಾರೆ.
ಟಾಮ್ ಲಾಥಮ್
ಟಾಮ್ ಲಾಥಮ್

ಆಕ್ಲೆಂಡ್: ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಯ ಶತಕ ಸಿಡಿಸಿದ ಕಿವೀಸ್ ಪಡೆಯ ಟಾಮ್ ಲಾಥಮ್ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಅಪೂರ್ವ ದಾಖಲೆಗೆ ಸಾಕ್ಷಿಯಾಗಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 307ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 47.1 ಓವರ್ ನಲ್ಲಿಯೇ 309ರನ್ ಗಳಿಸಿ ಇನ್ನೂ 17 ಎಸೆತಗಳು ಬಾಕಿ ಇರುವಂತೆ ಜಯ ಗಳಿಸಿತು. ಕಿವೀಸ್ ಜಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಲಾಥಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಮಹತ್ತರ ಪಾತ್ರ ನಿರ್ವಹಿಸಿದರು. ಲಾಥಮ್ ಕೇವಲ 104 ಎಸೆತಗಳಲ್ಲಿ ಬರೊಬ್ಬರಿ 146ರನ್ ಚಚ್ಚಿದರೆ, ನಾಯಕ ವಿಲಿಯಮ್ಸನ್ 98 ಎಸೆತಗಳಲ್ಲಿ ಅಜೇಯ 94ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಈ ಮೂಲಕ ಲಾಥಮ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ನ್ಯೂಜಿಲೆಂಡ್ ಪರ 3ನೇ ಬಾರಿಗೆ 200ಕ್ಕೂ ಅಧಿಕ ರನ್ ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಮೊದಲ ನ್ಯೂಜಿಲೆಂಡ್ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ 2017ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಸ್ ಟೇಲರ್ ಜೊತೆಗೂಡಿ ಲಾಥಮ್ 200ಕ್ಕೂ ಅಧಿಕ ರನ್ ಗಳ ಜೊತೆಯಾಟವಾಡಿದ್ದರು. ಇದೀಗ ತವರಿನಲ್ಲೇ ಮತ್ತೆ ಭಾರತದ ವಿರುದ್ಧ 200ಕ್ಕೂ ಅಧಿಕ ರನ್ ಗಳ ಜೊತೆಯಾಟದಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದ್ದಾರೆ.

ಇನ್ನು ನ್ಯೂಜಿಲೆಂಡ್ ಪರ ರಾಸ್ ಟೇಲರ್, ಮಾರ್ಟಿನ್ ಗಪ್ಟಿಲ್ ಮತ್ತು ಹಾಲಿ ನಾಯಕ ಕೇನ್ ವಿಲಿಯಮ್ಸನ್ ತಲಾ 2 ಬಾರಿ 200ಕ್ಕೂ ಅಧಿಕ ರನ್ ಗಳ ಜೊತೆಯಾಟದಲ್ಲಿ ಪಾಲ್ಗೊಂಡ ದಾಖಲೆ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com