1ನೇ ಏಕದಿನ: ಭಾರತದ ವಿರುದ್ಧ ಭರ್ಜರಿ ಜೊತೆಯಾಟ; ಪಾಕಿಸ್ತಾನ ದಾಖಲೆ ಮುರಿದ ವಿಲಿಯಮ್ಸನ್-ಲಾಥಮ್ ಜೊತೆಯಾಟ

ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಭರ್ಜರಿ ಗೆಲುವಿಗೆ ಕಾರಣವಾದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ ಜೊತೆಯಾಟ ಪಾಕಿಸ್ತಾನ ಮಹಮದ್ ಯೂಸುಫ್ ಮತ್ತು ಶೊಯೆಬ್ ಮಲ್ಲಿಕ್ ರ ದಾಖಲೆಯನ್ನು ಹಿಂದಿಕ್ಕಿದೆ.
ವಿಲಿಯಮ್ಸನ್-ಲಾಥಮ್ ಜೊತೆಯಾಟ
ವಿಲಿಯಮ್ಸನ್-ಲಾಥಮ್ ಜೊತೆಯಾಟ

ಆಕ್ಲೆಂಡ್: ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಭರ್ಜರಿ ಗೆಲುವಿಗೆ ಕಾರಣವಾದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ ಜೊತೆಯಾಟ ಪಾಕಿಸ್ತಾನ ಮಹಮದ್ ಯೂಸುಫ್ ಮತ್ತು ಶೊಯೆಬ್ ಮಲ್ಲಿಕ್ ರ ದಾಖಲೆಯನ್ನು ಹಿಂದಿಕ್ಕಿದೆ.

ಇಂದು ಆಕ್ಲೆಂಡ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 307ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 47.1 ಓವರ್ ನಲ್ಲಿಯೇ 309ರನ್ ಗಳಿಸಿ ಇನ್ನೂ 17 ಎಸೆತಗಳು ಬಾಕಿ ಇರುವಂತೆ ಜಯ ಗಳಿಸಿತು. ಕಿವೀಸ್ ಜಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಲಾಥಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಮಹತ್ತರ ಪಾತ್ರ ನಿರ್ವಹಿಸಿದರು. ಲಾಥಮ್ ಕೇವಲ 104 ಎಸೆತಗಳಲ್ಲಿ ಬರೊಬ್ಬರಿ 146ರನ್ ಚಚ್ಚಿದರೆ, ನಾಯಕ ವಿಲಿಯಮ್ಸನ್ 98 ಎಸೆತಗಳಲ್ಲಿ ಅಜೇಯ 94ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಈ ಅಮೋಘ ಜೊತೆಯಾಟದೊಂದಿಗೆ ವಿಲಿಯಮ್ಸನ್-ಲಾಥಮ್ ಜೋಡಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಭಾರತದ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ 4ನೇ ವಿಕೆಟ್ ನಲ್ಲಿ ದಾಖಲಾದ ಗರಿಷ್ಛ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 2009ರಲ್ಲಿ ಸೆಂಚೂರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಮಹಮದ್ ಯೂಸುಫ್ ಮತ್ತು ಶೊಯೆಬ್ ಮಲ್ಲಿಕ್ ಜೋಡಿ 206 ರನ್ ಕಲೆ ಹಾಕಿತ್ತು. ಈ ದಾಖಲೆಯನ್ನು ವಿಲಿಯಮ್ಸನ್-ಲಾಥಮ್ ಜೋಡಿ ಹಿಂದಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com