ಭಾರತ vs ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯವೂ ಮಳೆಯಿಂದ ರದ್ದು, ಸರಣಿ ಸೋತ ಟೀಂ ಇಂಡಿಯಾ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಪಂದ್ಯವೂ ಮಳೆಯಿಂದಾಗಿ ರದ್ದಾಗಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ತಂಡ 1-0 ಅಂತರದಲ್ಲಿ ತನ್ನ ಕೈ ವಶ ಮಾಡಿಕೊಂಡಿದೆ.
ಮಳೆಯಿಂದ ಪಂದ್ಯ ರದ್ದು
ಮಳೆಯಿಂದ ಪಂದ್ಯ ರದ್ದು

ಕ್ರೈಸ್ಟ್‌ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಪಂದ್ಯವೂ ಮಳೆಯಿಂದಾಗಿ ರದ್ದಾಗಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ತಂಡ 1-0 ಅಂತರದಲ್ಲಿ ತನ್ನ ಕೈ ವಶ ಮಾಡಿಕೊಂಡಿದೆ.

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಈ ಮೂಲಕ ಕಿವೀಸ್ ಪಡೆ ಏಕದಿನ ಸರಣಿಯನ್ನು 1-0 ಅಂತರದಿಂದ ತಮ್ಮದಾಗಿಸಿಕೊಂಡಿದೆ. ಈ ಸರಣಿಗೂ ಮುನ್ನ ನಡೆದ ಟಿ20 ಸರಣಿಯನ್ನು ನ್ಯೂಜಿಲೆಂಡ್ ತಂಡ ಕಳೆದುಕೊಂಡಿತ್ತು. ಆದರೆ ಏಕದಿನ ಸರಣಿಯಲ್ಲಿ ಸಿಕ್ಕ ಮೊದಲ ಗೆಲುವು ಕೇನ್ ವಿಲಿಯಮ್ಸನ್ (Kane Williamson) ಪಡೆಯನ್ನು ಸರಣಿ ಗೆಲ್ಲುವಂತೆ ಮಾಡಿದೆ.

ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಹೀನಾಯ ಪ್ರದರ್ಶನ ನೀಡಿತು. ಭಾರತ ಕೇವಲ 219ರನ್ ಗಳಿಗೆ ಆಲೌಟ್ ಆಗುವ ಮೂಲಕ ಮೂರನೇ ಪಂದ್ಯವನ್ನು ಸೋಲುವುದು ನಿಚ್ಚಳವಾಗಿತ್ತು. ಆದರೆ ನ್ಯೂಜಿಲೆಂಟ್ ಟಾರ್ಗೆಟ್ ಚೇಸಿಂಗ್ ವೇಳೆ 18 ಓವರ್ ನಲ್ಲಿ ಆರಂಭವಾದ ಮಳೆ ಮತ್ತೆ ನಿಲ್ಲಲಿಲ್ಲ. ಈ ಹೊತ್ತಿಗಾಗಲೇ ಕಿವೀಸ್ ಪಡೆ ಒಂದು ವಿಕೆಟ್ ನಷ್ಟಕ್ಕೆ 104 ರನ್ ಗಳಿ ಗೆಲುವಿನತ್ತ ದಾಪುಗಾಲಿರಿಸಿತ್ತು. ಆದರೆ ಈ ವೇಳೆ ಸುರಿದ ಮಳೆ ನ್ಯೂಜಿಲೆಂಡ್ ಗೆಲುವಿಗೆ ಅಡ್ಡಿಯಾಯಿತು. ಇದು ಧವನ್ ಪಡೆಯ ಸರಣಿ ಸೋಲಿನ ತೀವ್ರತೆಯನ್ನು ಕೊಂಚ ಕಡಿತಗೊಳಿಸಿದ. ಈ ಪಂದ್ಯದಲ್ಲಿ ಮೊದಲಯ ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 219 ರನ್​ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ನೀರು ಕುಡಿದಷ್ಟು ಸುಲಭವಾಗಿ ಟಾರ್ಗೆಟ್ ಬೆನ್ನಟ್ಟಿತ್ತು. ಆದರೆ ಕಿವೀಸ್ ಇನ್ನಿಂಗ್ಸ್​ನ 18ನೇ ಓವರ್​ನಲ್ಲಿ ಎಂಟ್ರಿಕೊಟ್ಟ ವರುಣ ಪಂದ್ಯವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದ.

ಸತತ ಮೂರನೇ ಪಂದ್ಯದಲ್ಲೂ ಟಾಸ್ ಸೋತ ಧವನ್
ಇನ್ನು ಈ ಸರಣಿಯುದ್ದಕ್ಕೂ ಟಾಸ್ ಗೆಲ್ಲುವಲ್ಲಿ ವಿಫಲರಾದ ನಾಯಕ ಧವನ್ ಕೊನೆಯ ಪಂದ್ಯದಲ್ಲೂ ಟಾಸ್ ಸೋತರು. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಎಂದಿನಂತೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲೆರಡು ಪಂದ್ಯಗಳಲ್ಲಿ ಟಾಸ್ ಸೋತರು ಉತ್ತಮ ಆರಂಭ ಮಾಡಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಎಡವಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್ ಹಾಗೂ ಧವನ್ ರನ್ ಗಳಿಸಲು ಪರದಾಡಿದರು. ಅದರಲ್ಲೂ ಉತ್ತಮ ಫಾರ್ಮ್​ನಲ್ಲಿದ್ದ ಗಿಲ್​ಗೆ ಮೊದಲ 6 ಓವರ್​ಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ ಭಾರತ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಈ ಪಂದ್ಯದಲ್ಲಿ ಬರೋಬ್ಬರಿ 22 ಎಸೆತಗಳನ್ನು ಎದುರಿಸಿದ ಗಿಲ್ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು. ಗಿಲ್ ವಿಕೆಟ್ ಬಳಿಕ ನಾಯಕ ಧವನ್ ಕೂಡ 45 ಎಸೆತಗಳಲ್ಲಿ 28 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಪಂತ್ ಜೊತೆಗೂಡಿದ ಶ್ರೇಯಸ್ ಅಯ್ಯರ್ ನಿಧಾನವಾಗಿ ಟೀಂ ಇಂಡಿಯಾ ಇನ್ನಿಂಗ್ಸ್ ಕಟ್ಟಿದರು. ಆದರೆ ಸತತ ಅವಕಾಶಗಳ ಹೊರತಾಗಿಯೂ ಉಪನಾಯಕ ಪಂತ್ ರನ್ ಗಳಿಸುವಲ್ಲಿ ಎಡವಿದರು. ಈ ಸರಣಿಯುದ್ದಕ್ಕೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಪಂತ್ ಈ ಪಂದ್ಯದಲ್ಲೂ ಕೇವಲ 10 ರನ್​ಗಳಿಗೆ ಸುಸ್ತಾದರು. ಆ ಬಳಿಕ ಬಂದ ಸೂರ್ಯಕುಮಾರ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಸುಂದರ್ ಅರ್ಧಶತಕ
ಅಯ್ಯರ್ ಕೂಡ ಅರ್ಧಶತಕದಂಚಿನಲ್ಲಿ ಎಡವಿ 49 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್, ಈ ಪಂದ್ಯದಲ್ಲೂ ಸಮಯೋಜಿನ ಇನ್ನಿಂಗ್ಸ್ ಆಡಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರು ಬಾಲಗೊಂಚಿಗಳ ಜೊತೆಗೂಡಿ ಅದ್ಭುತ ಅರ್ಧಶತಕ ಸಿಡಿಸಿ ಮಿಂಚಿದರು. ತಂಡದ ಪರ ಸುಂದರ್ ಹಾಗೂ ಶ್ರೇಯಸ್ ಬಿಟ್ಟರೆ ಮತ್ತ್ಯಾವ ಆಟಗಾರನು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅಂತಿಮವಾಗಿ ಟೀಂ ಇಂಡಿಯಾ ತನ್ನೇಲ್ಲ ವಿಕೆಟ್ ಕಳೆದುಕೊಂಡು 219 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ನೀಡಿದ 220ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಕಿವೀಸ್ ಪಡೆ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾನ್ವೇ ಹಾಗೂ ಅಲೆನ್ ತಂಡಕ್ಕೆ 97 ರನ್​ಗಳ ಅದ್ಭುತ ಜೊತೆಯಾಟ ತಂದುಕೊಟ್ಟರು. ಆರಂಭದಲ್ಲಿ ರನ್ ಗಳಿಸಲು ಪರದಾಡಿದ ಈ ಜೋಡಿ ನಂತರ ಲಯಕ್ಕೆ ಮರಳಿ ಭಾರತದ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಈ ವೇಳೆ ಅರ್ಧಶತಕ ಸಿಡಿಸಿದ ಅಲೆನ್ ಉಮ್ರಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಅಷ್ಟರಲ್ಲಾಗಲೇ ಎಂಟ್ರಿಕೊಟ್ಟ ವರುಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸುವಂತೆ ಮಾಡಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com