ಕ್ಯಾಚ್ ಹಿಡಿಯಲು ಹೋದ ಇಂಗ್ಲೆಂಡ್ ಬೌಲರ್ ಗೆ ಅಡ್ಡಿಪಡಿಸಿದ ಮ್ಯಾಥ್ಯೂ ವೇಡ್, ಆದರೂ ಆಸಿಸ್ ಪಂದ್ಯ ಗೆಲ್ಲಲಿಲ್ಲ!

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ರಣರೋಚಕ ಘಟನೆಗೆ ಸಾಕ್ಷಿಯಾಗಿದ್ದು ಈ ಹಿಂದೆ ಭಾರತದ ದೀಪ್ತಿ ಶರ್ಮಾ ಅವರ ಮಂಕಂಡ್ ರನೌಟ್ ಟೀಕಿಸಿದ್ದ ಕಾಂಗರೂಗಳು ಇದೀಗ ಕ್ಯಾಚ್ ಹಿಡಿಯಲು ಹೋದ ಇಂಗ್ಲೆಂಡ್ ಬೌಲರ್ ಗೆ ಅಡ್ಡಿಪಡಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಬೌಲರ್ ತಳ್ಳಿದ ವೇಡ್
ಬೌಲರ್ ತಳ್ಳಿದ ವೇಡ್

ಸಿಡ್ನಿ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ರಣರೋಚಕ ಘಟನೆಗೆ ಸಾಕ್ಷಿಯಾಗಿದ್ದು ಈ ಹಿಂದೆ ಭಾರತದ ದೀಪ್ತಿ ಶರ್ಮಾ ಅವರ ಮಂಕಂಡ್ ರನೌಟ್ ಟೀಕಿಸಿದ್ದ ಕಾಂಗರೂಗಳು ಇದೀಗ ಕ್ಯಾಚ್ ಹಿಡಿಯಲು ಹೋದ ಇಂಗ್ಲೆಂಡ್ ಬೌಲರ್ ಗೆ ಅಡ್ಡಿಪಡಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಹೌದು.. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಆಸ್ಟ್ರೇಲಿಯಾ ಬ್ಯಾಟ್ಸ್‌ಮ್ಯಾನ್‌ ಮ್ಯಾಥ್ಯೂ ವೇಡ್ ನೀಡಿದ ಕ್ಯಾಚ್ ಹಿಡಿಯಲು ಬಂದ ಮಾರ್ಕ್‍ವುಡ್‍ರನ್ನು ತಳ್ಳಿದ ಪ್ರಸಂಗವೊಂದು ವಿವಾದಕ್ಕೆ ಕಾರಣವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನೀಡಿದ 209 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟುತ್ತಿದ್ದ ಆಸ್ಟ್ರೇಲಿಯಾಗೆ ಕೊನೆಯ 22 ಎಸೆತಗಳಲ್ಲಿ 39 ರನ್ ಬೇಕಾಗಿತ್ತು. 

ಈ ವೇಳೆ ವೇಡ್ ಮತ್ತು ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡುತ್ತಿದ್ದರು. 17ನೇ ಓವರ್ ಎಸೆದ ಮಾರ್ಕ್‍ವುಡ್ ಎಸೆತವೊಂದರಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ನೀಡಿದರು. ಇದು ಸುಲಭದ ಕ್ಯಾಚ್ ಕೂಡ ಆಗಿತ್ತು. ಬೌಲಿಂಗ್ ಮಾಡಿದ ಮಾರ್ಕ್‍ವುಡ್ ಸ್ವತಃ ಕ್ಯಾಚ್ ಹಿಡಿಯಲು ಮುಂದಾಗಿದ್ದರು. ಇನ್ನೇನು ಬಾಲ್ ಕೈ ಸೇರಬೇಕೆಂದಿದ್ದಾಗ ವೇಡ್ ಕೈಗಳಿಂದ ಮಾರ್ಕ್‍ವುಡ್‍ರನ್ನು ತಡೆದರು. ಇದರಿಂದ ಮಾರ್ಕ್‍ವುಡ್‍ ಕ್ಯಾಚ್ ಕೈಚೆಲ್ಲಿದರು. ಜೊತೆಗೆ ಫೀಲ್ಡಿಂಗ್‍ಗೆ ಅಡ್ಡಿ ಕುರಿತಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನು ಒಂದು ವೇಳೆ ಇಂಗ್ಲೆಂಡ್ ತಂಡ ಈ ಕುರಿತು ಅಂಪೈರ್ ಬಳಿ ಗಟ್ಟಿಯಾಗಿ ಮನವಿ ಸಲ್ಲಿಸಿದ್ದರೆ ಖಂಡಿತವಾಗಿಯೂ ಇದನ್ನು ಔಟ್ (Out) ಎಂಬ ತೀರ್ಪು ಬರುವ ಸಾಧ್ಯತೆ ಇತ್ತು. ಕಾರಣ ಎಂದು ಕ್ರಿಕೆಟ್ ನಿಯಮದ ಸ್ಪಷ್ಟ ಉಲ್ಲಂಘನೆ.. ಯಾಕೆಂದರೆ ವೇಡ್ ಸ್ಪಷ್ಟವಾಗಿ ಮಾರ್ಕ್‍ವುಡ್‍ರನ್ನು ತಳ್ಳಿದ್ದು ವಿಡಿಯೋದಲ್ಲಿ ತಿಳಿಯುತ್ತಿದೆ. ಆದರೆ ಇಂಗ್ಲೆಂಡ್ ಆಟಗಾರರು ಅಂಪೈರ್ ಬಳಿ ಗಟ್ಟಿಯಾಗಿ ಮನವಿ ಮಾಡಲಿಲ್ಲ. ಅಲ್ಲದೆ ಅಂಪೈರ್ ಗಳು ಕೂಡ ಈ ಬಗ್ಗೆ ನಿರ್ಧಾರಕ್ಕೆ ಬರಲಿಲ್ಲ. ಕಾರಣ ವುಡ್ ಔಟಾಗದೆ ಉಳಿದರು. ಇದೀಗ ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ವೇಡ್ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ. 

ಆಸಿಸ್ ಗೆ ಸೋಲು
ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿದ ಪರಿಣಾಮ ಬಚಾವ್ ಆಗಿದ್ದ ವೇಡ್ ಆಸ್ಟ್ರೇಲಿಯಾವನ್ನು ಗೆಲ್ಲಿಸಲು ಕೊನೆಯ ಓವರ್ ವರೆಗೂ ಹೋರಾಡಿದರು. ಆದರೆ 19.3 ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕೊನೆಗೆ ಕ್ಯಾಚ್ ನೀಡಿ ಔಟ್ ಆದರು. ಅಂತಿಮವಾಗಿ ಆಸ್ಟ್ರೇಲಿಯಾ ಸೋಲು ಕಾಣುವಂತಾಯಿತು. ಇಂಗ್ಲೆಂಡ್ 8 ರನ್‍ಗಳಿಂದ ಜಯಭೇರಿ ಬಾರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com