ಅರ್ಷದೀಪ್ ಸಿಂಗ್ ರಿಂದ ಇತಿಹಾಸ ಸೃಷ್ಟಿ; ವಿಶ್ವಕಪ್‌ನ ಮೊದಲ ಎಸೆತದಲ್ಲಿ ಬಾಬರ್ ಅಜಂ ಗೋಲ್ಡನ್ ಡಕೌಟ್, ವಿಡಿಯೋ

ಟೀಂ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವಕಪ್ ನ ಮೊದಲ ಎಸೆತದಲ್ಲೇ ಪಾಕಿಸ್ತಾನದ ತಂಡದ ಬ್ಯಾಟರ್ ಬಾಬರ್ ನನ್ನು ಗೋಲ್ಡನ್ ಡಕೌಟ್ ಮಾಡಿದ್ದಾರೆ.
ಅರ್ಷದೀಪ್ ಸಿಂಗ್
ಅರ್ಷದೀಪ್ ಸಿಂಗ್

ಮೆಲ್ಬೋರ್ನ್: ಟೀಂ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವಕಪ್ ನ ಮೊದಲ ಎಸೆತದಲ್ಲೇ ಪಾಕಿಸ್ತಾನದ ತಂಡದ ಬ್ಯಾಟರ್ ಬಾಬರ್ ನನ್ನು ಗೋಲ್ಡನ್ ಡಕೌಟ್ ಮಾಡಿದ್ದಾರೆ.

ಐಸಿಸಿ ಟಿ20 ಕ್ರಿಕೆಟ್ ನಲ್ಲಿ ವಿಶ್ವದ ನಂಬರ್ ಒನ್ ಆಟಗಾರನಾಗಿರುವ ಬಾಬರ್ ಅಜಮ್ ಟಿ20 ಪಂದ್ಯದಲ್ಲಿ ಗೋಲ್ಡನ್ ಡಕೌಟ್ ಆಗುವ ಮೂಲಕ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಕಳಪೆ ದಾಖಲೆ ಮುರಿದಿದ್ದಾರೆ. ಇಮ್ರಾನ್ ಖಾನ್ ನಂತರ ವಿಶ್ವಕಪ್‌ ಪಂದ್ಯಗಳಲ್ಲಿ ಭಾರತದ ವಿರುದ್ಧ ಖಾತೆ ತೆರೆಯದೆ ಔಟಾದ ಪಾಕಿಸ್ತಾನದ ಎರಡನೇ ನಾಯಕ ಎಂಬ ಕುಖ್ಯಾತಿಗೆ ಬಾಬರ್ ಪಾತ್ರರಾಗಿದ್ದಾರೆ.

ನಿನ್ನೆ ಪಾಕಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿತ್ತು. ಇನ್ನು ಈ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಬಾಬರ್ ಅಜಮ್ ನನ್ನು ಎಲ್ಬಿಡಬ್ಲ್ಯು ಮಾಡಿದರು.

ಕಳೆದ ತಿಂಗಳು ಟಿ20 ಏಷ್ಯಾಕಪ್ ವೇಳೆ ಅರ್ಷದೀಪ್ ಸಿಂಗ್ ಆಸಿಫ್ ಅಲಿ ನೀಡಿದ ಸರಳ ಕ್ಯಾಚ್ ಅನ್ನು ಕೈಬಿಟ್ಟಿದ್ದರು. ಇದರಿಂದಾಗಿ ತಂಡ ಪಾಕಿಸ್ತಾನದ ವಿರುದ್ಧ ಸೋತಿತ್ತು. ಇದಾದ ನಂತರ ಅರ್ಷದೀಪ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಈ 23ರ ಹರೆಯದ ಯುವ ಬೌಲರ್ ತಾನು ಪುನರಾಗಮನ ಮಾಡುತ್ತೇನೆ ಮತ್ತು ಅದೂ ಶ್ರೇಷ್ಠ ಎಂದು ನಿರ್ಧರಿಸಿದ್ದರು. 2022ರ ಟಿ20 ವಿಶ್ವಕಪ್‌ನಲ್ಲಿ ಅವರು ಮೊದಲ ಬಾರಿಗೆ ಅವಕಾಶ ಪಡೆದಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com