ಟಿ20 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾಗೆ 104 ರನ್ ಗಳ ಭರ್ಜರಿ ಜಯ
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ನ ಇಂದಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದ.ಆಫ್ರಿಕಾ ತಂಡ 104 ರನ್ ಗಳ ಭರ್ಜರಿ ಜಯ ಸಾಧಿಸಿದೆ.
Published: 27th October 2022 12:33 PM | Last Updated: 27th October 2022 01:19 PM | A+A A-

ಆಫ್ರಿಕಾಗೆ ಜಯ
ಮೆಲ್ಬೋರ್ನ್: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ನ ಇಂದಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದ.ಆಫ್ರಿಕಾ ತಂಡ 104 ರನ್ ಗಳ ಭರ್ಜರಿ ಜಯ ಸಾಧಿಸಿದೆ.
South Africa register a thumping win over Bangladesh, clinching two crucial points.#T20WorldCup | #SAvBAN | https://t.co/Ji9TL3CpQ9 pic.twitter.com/uIxptSdIEK
— ICC (@ICC) October 27, 2022
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205ರನ್ ಬೃಹತ್ ಮೊತ್ತ ಪೇರಿಸಿತು. ಆಫ್ರಿಕಾ ಪರ ರೋಸೋ 109ರನ್ ಗಳಿಸಿ ಆಫ್ರಿಕಾ ಬೃಹತ್ ಗಳಿಸಲು ನೆರವಾದರು. ರೋಸೋಗೆ ಉತ್ತಮ ಸಾಥ್ ನೀಡಿದ ಡಿ ಕಾಕ್ 63 ರನ್ ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 205ರನ್ ಗಳಿಸಿತು.
ಇದನ್ನೂ ಓದಿ: ಟಿ20 ವಿಶ್ವಕಪ್: ಇಂಗ್ಲೆಂಡ್ ಗೆಲುವು ಕಸಿದ ಮಳೆ: ಐರ್ಲೆಂಡ್ ಗೆ 5 ರನ್ ಗಳ ಜಯ
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ ಆಫ್ರಿಕನ್ ಬೌಲರ್ ಗಳ ದಾಳಿಗೆ ತತ್ತರಿಸಿ 16.3 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 104ರನ್ ಗಳ ಅಂತರದ ಹೀನಾಯ ಸೋಲು ಕಂಡಿತು. ಆಫ್ರಿಕಾ ಪರ ಅನ್ರಿಚ್ ನಾರ್ಟ್ಜೆ 4 ವಿಕೆಟ್ ಪಡೆದು ಮಿಂಚಿದರೆ, ತಬ್ರೇಜ್ ಶಂಸಿ 3 ವಿಕೆಟ್ ಮತ್ತು ರಬಾಡಾ ಮತ್ತು ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು.