ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿಯಿಂದ ಹೊಸ ದಾಖಲೆ, ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ!

ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಟಗಾರ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ.  ಅತಿ ವೇಗವಾಗಿ 1,000 ರನ್ ಗಳಿಸಿದ ವಿಶ್ವದ ಎರಡನೇ ಹಾಗೂ ದೇಶದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಪರ್ತ್: ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಟಗಾರ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ.  ಅತಿ ವೇಗವಾಗಿ 1,000 ರನ್ ಗಳಿಸಿದ ವಿಶ್ವದ ಎರಡನೇ ಹಾಗೂ ದೇಶದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಇಂದು ನಡೆದ  ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ -12 ಹಂತದ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಈ ಹೊಸ ದಾಖಲೆ ಬರೆದರು. 22 ಪಂದ್ಯಗಳಲ್ಲಿ 22 ಇನ್ನಿಂಗ್ಸ್ ಗಳಲ್ಲಿ 83.41 ರ ಸರಾಸರಿಯಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. 

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಮೊದಲ ಸ್ಥಾನದಲ್ಲಿದ್ದಾರೆ. ಅವರು 31 ಪಂದ್ಯಗಳಿಂದ 39.07 ಸರಾಸರಿಯಲ್ಲಿ 1,016 ರನ್ ಗಳಿಸಿದ್ದಾರೆ.  ವಿರಾಟ್ ಕೊಹ್ಲಿ ಜಯವರ್ಧನೆ ನಂತರದ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 36 ಪಂದ್ಯಗಳ 33 ಇನ್ನಿಂಗ್ಸ್ ಗಳಿಂದ 919 ರನ್ ಗಳಿಸಿದ್ದಾರೆ. 

ಸದ್ಯ ಟಿ-20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ದಾಖಲೆಯೂ ವಿರಾಟ್ ಹೆಸರಿನಲ್ಲಿದೆ. ಅವರು 12 ಅರ್ಧಶತಕ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಕ್ರೀಸ್ ಗೇಲ್ ಮತ್ತು ರೋಹಿತ್ ಶರ್ಮಾ ಇದ್ದಾರೆ. ಈ ಇಬ್ಬರೂ ತಲಾ 9 ಬಾರಿ 50ಕ್ಕಿಂತ ಹೆಚ್ಚು ರನ್ ಬಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com