ಖಾವೋ ಪಿಯೋ ಐಶ್ ಕರೋ ಮಿತ್ರೋ…! ಹಳೆಯ ಫೋಟೋದೊಂದಿಗೆ ವಿರಾಟ್ ಕೊಹ್ಲಿ ಸಂದೇಶ ಕೊಟ್ಟಿದ್ಯಾರಿಗೆ?

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶನಿವಾರ ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶನಿವಾರ ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಈ ವಾರದ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಶತಕದ ಬರವನ್ನು ಅಂತ್ಯಗೊಳಿಸಿದ್ದರು. ಅವರು ಕೇವಲ 61 ಎಸೆತಗಳಲ್ಲಿ 122 ರನ್ ಗಳಿಸಿದರು. ಈ ಮೂಲಕ ತಮ್ಮ 71ನೇ ಅಂತಾರಾಷ್ಟ್ರೀಯ ಶತಕವನ್ನು ದಾಖಲಿಸಿದರು. ಅವರ ಹಿಂದಿನ ಸೆಂಚುರಿ ಸ್ಕೋರ್ ಸುಮಾರು ಮೂರು ವರ್ಷಗಳ ಹಿಂದೆ ಬಾಂಗ್ಲಾದೇಶದ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ಬಂದಿತ್ತು. ಇನ್ ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಆರೋಗ್ಯಕರ ಊಟವನ್ನು ಆನಂದಿಸುತ್ತಿದ್ದಾರೆ.

ಖಾವೋ ಪಿಯೋ ಐಶ್ ಕರೋ ಮಿತ್ರೋ, ದಿಲ್ ಪರ್ ಕಿಸೆ ದ ದುಖಾಯೇ ನಾ (ತಿನ್ನಿರಿ, ಕುಡಿಯಿರಿ ಮತ್ತು ಸ್ನೇಹಿತರನ್ನು ಆನಂದಿಸಿ, ಯಾರ ಭಾವನೆಗಳನ್ನು ನೋಯಿಸಬೇಡಿ) ಎಂದು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಸೂಪರ್ 4 ಹಂತದಲ್ಲಿ ಅಂತಿಮವಾಗಿ ಫೈನಲಿಸ್ಟ್ ಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತ ನಂತರ ಭಾರತ ಏಷ್ಯಾಕಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಏಷ್ಯಾಕಪ್‌ಗೆ ಮುನ್ನ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದ ಕೊಹ್ಲಿ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಗಳಿಂದ ಒಂದು ತಿಂಗಳ ವಿರಾಮವನ್ನು ತೆಗೆದುಕೊಂಡು ಪಂದ್ಯಾವಳಿಗೆ ಹೊಸದಾಗಿ ಮರಳಿದರು. ಅವರ ಚೊಚ್ಚಲ ಟಿ20 ಶತಕವು ಅವರನ್ನು 71 ಅಂತರಾಷ್ಟ್ರೀಯ ಶತಕಗಳಿಗೆ ಕೊಂಡೊಯ್ದಿತು.

2008 ರಲ್ಲಿ ಶ್ರೀಲಂಕಾದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿನೊಂದಿಗೆ ಪ್ರಾರಂಭವಾದ ಕೊಹ್ಲಿ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 27 ಟೆಸ್ಟ್ ಮತ್ತು 43 ಒನ್ ಡೇ ಶತಕಗಳನ್ನು ಹೊಡೆದಿದ್ದಾರೆ. ಸೆಪ್ಟೆಂಬರ್ 20 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಈಗ ಆಕ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಹೊರಡುವ ಮೊದಲು ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಮತ್ತು ಒನ್ ಡೇ ಪಂದ್ಯಗಳನ್ನು ಆಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com