ಪಾಕಿಸ್ತಾನದ ಮಾಜಿ ಅಂಪೈರ್ ಅಸದ್ ರೌಫ್ ಹೃದಯಾಘಾತದಿಂದ ನಿಧನ

ಪಾಕಿಸ್ತಾನದ ಅಂಪೈರ್ ಅಸದ್ ರೌಫ್ (66) ಹಠಾತ್ ಹೃದಯಾಘಾತದಿಂದ ಬುಧವಾರ ಲಾಹೋರ್‌ನಲ್ಲಿ ನಿಧನರಾಗಿದ್ದಾರೆ. ನಿಧನದ ಸುದ್ದಿಯನ್ನು ಅವರ ಸಹೋದರ ತಾಹಿರ್ ಖಚಿತಪಡಿಸಿದ್ದು, ಹೃದಯ ಸ್ತಂಭನದಿಂದ ಸಹೋದರ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಸದ್ ರೌಫ್
ಅಸದ್ ರೌಫ್

ಪಾಕಿಸ್ತಾನದ ಅಂಪೈರ್ ಅಸದ್ ರೌಫ್ (66) ಹಠಾತ್ ಹೃದಯಾಘಾತದಿಂದ ಬುಧವಾರ ಲಾಹೋರ್‌ನಲ್ಲಿ ನಿಧನರಾಗಿದ್ದಾರೆ. ನಿಧನದ ಸುದ್ದಿಯನ್ನು ಅವರ ಸಹೋದರ ತಾಹಿರ್ ಖಚಿತಪಡಿಸಿದ್ದು, ಹೃದಯ ಸ್ತಂಭನದಿಂದ ಸಹೋದರ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅಂಪೈರ್ ವೃತ್ತಿಯಿಂದ ನಿವೃತ್ತರಾಗಿದ್ದ ರೌಫ್ ಆ ಬಳಿಕ ಪಾಕಿಸ್ತಾನದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಎಂದಿನಂತೆ ಬುಧವಾರ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಹೋದರ ತಿಳಿಸಿದ್ದಾರೆ.

ಅಸದ್ ರೌಫ್ ಅವರು ಅಲೀಂ ದಾರ್ ಅವರಂತಹ ಅಂಪೈರ್‌ಗಳೊಂದಿಗೆ ಪಾಕಿಸ್ತಾನದ ಎಲೈಟ್ ಅಂಪೈರ್‌ಗಳಲ್ಲಿ ಒಬ್ಬರು. 2006ರಲ್ಲಿ ಅಸದ್ ರೌಫ್ ಅವರನ್ನು ಐಸಿಸಿಯ ಎಲೈಟ್ ಪ್ಯಾನೆಲ್ ಆಫ್ ಅಂಪೈರ್‌ಗಳಿಗೆ ಸೇರಿಸಲಾಯಿತು. ನಂತರ ಅವರು 47 ಟೆಸ್ಟ್, 98 ಏಕದಿನ ಪಂದ್ಯಗಳು ಮತ್ತು 23 ಟಿ20 ಪಂದ್ಯಗಳಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದರು.

ಸಾಧನೆಯ ವಾರ್ಷಿಕ ಪರಿಶೀಲನೆಯ ನಂತರ 2013ರಲ್ಲಿ ಅಂಪೈರ್‌ಗಳ ಎಲೈಟ್ ಸಮಿತಿಯಿಂದ ಕೈಬಿಡುವ ಮೊದಲು ಅವರು ಏಳು ವರ್ಷಗಳ ಕಾಲ ಅಗ್ರಸ್ಥಾನದಲ್ಲಿ ಸೇವೆ ಸಲ್ಲಿಸಿದರು. ಅಸದ್ ರೌಫ್ 1998ರಲ್ಲಿ ತಮ್ಮ ಅಂಪೈರಿಂಗ್ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು 2000ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಅಂಪೈರಿಂಗ್ ಮಾಡಿದರು. ನಾಲ್ಕು ವರ್ಷಗಳ ನಂತರ 2004 ರಲ್ಲಿ, ರೌಫ್ ಅವರನ್ನು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಂಪೈರ್‌ಗಳ ಸಮಿತಿಗೆ ಸೇರಿಸಲಾಯಿತು.

2013 ರಲ್ಲಿ ಅಂಪೈರ್ ಫಿಕ್ಸಿಂಗ್ ಆರೋಪ ಕೇಳಿ ಬಂದ ನಂತರ ಅವರು ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು 2016 ರಲ್ಲಿ 5 ವರ್ಷಗಳ ಕಾಲ ನಿಷೇಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com