ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಪಾಕ್ ಆಟಗಾರ, ವಿಡಿಯೋ ವೈರಲ್!
ಪಾಕಿಸ್ತಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಮೈದಾದನಲ್ಲಿ ಆಟಗಾರನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು ಇದು ಸಹ ಆಟಗಾರರು ದುಃಖಿಸುವಂತೆ ಮಾಡಿದೆ.
Published: 25th September 2022 08:31 PM | Last Updated: 25th September 2022 08:35 PM | A+A A-

ಪ್ರತ್ಯಕ್ಷ ದೃಶ್ಯ
ಪಾಕಿಸ್ತಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಮೈದಾದನಲ್ಲಿ ಆಟಗಾರನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು ಇದು ಸಹ ಆಟಗಾರರು ದುಃಖಿಸುವಂತೆ ಮಾಡಿದೆ.
ಪಂದ್ಯ ನಡೆಯುತ್ತಿರುವಾಗಲೇ ಆಟಗಾರನಿಗೆ ಹೃದಯಾಘಾತವಾಗಿದ್ದು ಆತ ಅಲ್ಲೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನಿ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾಹೋರ್ ನ ಜುಬಲಿ ಕ್ರಿಕೆಟ್ ಮೈದಾದನಲ್ಲಿ ಇಂದು ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಪಾಕಿಸ್ತಾನ ಕಾರ್ಪೋರೇಟ್ ಲೀಗ್ ಅಡಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬರ್ಗರ್ ಪೇಂಟ್ಸ್ ಮತ್ತು ಫ್ರೈಸ್ ಲ್ಯಾಂಡ್ ತಂಡಗಳ ಮುಖಾಮುಖಿಯಾಗಿದ್ದವು. ಫ್ರೈಸ್ ಲ್ಯಾಂಡ್ ತಂಡ ಫೀಲ್ಡರ್ ಉಸ್ಮಾನ್ ಶಿನ್ವಾರಿಗೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದರು.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಟಗಾರ ಉಳಿಯಲಿಲ್ಲ. ಇನ್ನು ಶಿನ್ವಾರಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
During a match between Burger Paints and Friesland , Usman Shinwari fell down due to heart attack and was brought to the hospital immediately where he couldn't survive. RIP pic.twitter.com/YKnnawSiTq
— Tahir Jamil Khan (@TahirJamilKhan3) September 25, 2022