ಐಪಿಎಲ್ 2023: ರಾಜಸ್ಥಾನ ವಿರುದ್ಧದ ಪಂದ್ಯ, ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದ್ರಾಬಾದ್ 

ಹೈದ್ರಾಬಾದ್ ನಲ್ಲಿ  ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಾಬಾದ್, ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್

ಹೈದ್ರಾಬಾದ್: ಹೈದ್ರಾಬಾದ್ ನಲ್ಲಿ  ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಾಬಾದ್, ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಸನ್ ರೈಸರ್ಸ್ ಹೈದ್ರಾಬಾದ್ ನಾಯಕ ಭುವನೇಶ್ವರ್ ಕುಮಾರ್ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಕಳೆದ ವರ್ಷದ ರನ್ನರ್ ಆಫ್ ರಾಜಸ್ಥಾನ ರಾಯಲ್ಸ್ ಈ ವರ್ಷದಲ್ಲೂ ಅದೇ ಮ್ಯಾಜಿಕ್ ಮಾಡಲು ಎದುರು ನೋಡುತ್ತಿದೆ.ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಚಹಲ್, ಆರ್.ಅಶ್ವಿನ್ ಮತ್ತು ಅಡಂ ಜಂಪಾ ಅವರಂತಹ ಅತ್ಯುತ್ತಮ ಬೌಲರ್ ಇದ್ದರೆ,  ಸನ್ ರೈಸರ್ಸ್ ಹೈದ್ರಾಬಾದ್ ನಲ್ಲಿ ಉಮ್ರಾನ್ ಮಲ್ಲಿಕ್, ಭುವನೇಶ್ವರ್ ಕುಮಾರ್ ಮತ್ತು ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೋ ಜಾನ್ ಸೇನ್ ನಂತಹ ವೇಗಿಗಳಿದ್ದು, ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಸನ್ ರೈಸರ್ಸ್ ಹೈದ್ರಾಬಾದ್ ತಂಡ ಇಂತಿದೆ: ಮಯಾಂಕ್ ಅಗರ್ ವಾಲ್, ಆರ್ ಎ ತ್ರಿಪಾಠಿ, ಹೆಚ್ ಸಿ ಬ್ರೂಕ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಗ್ರೇನ್ ಫಿಲಿಫ್ಸ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್,ಭುವನೇಶ್ವರ್ ಕುಮಾರ್ (ನಾಯಕ) ಎಡೆ ಹೊಸೈನ್, ಉಮ್ರಾನ್ ಮಲ್ಲಿಕ್.

ರಾಜಸ್ಥಾನ ರಾಯಲ್ಸ್ ತಂಡ ಇಂತಿದೆ: ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಯುಜ್ವೇಂದ್ರ ಚಾಹಲ್, ಆರ್ ಪರಾಗ್, ಕೆಆರ್ ಸೇನ್, ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com