ಐಪಿಎಲ್ 2023: ಮುಂಬೈ ವಿರುದ್ಧದ ಪಂದ್ಯ, ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ ಸಿಬಿ!

ಉದ್ಯಾನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯ ನಡೆಯುತ್ತಿದೆ.
ಆರ್ ಸಿಬಿ ತಂಡದ ಫಾಪ್ ಡು ಪ್ಲೆಸಿಸ್, ರೋಹಿತ್ ಶರ್ಮಾ
ಆರ್ ಸಿಬಿ ತಂಡದ ಫಾಪ್ ಡು ಪ್ಲೆಸಿಸ್, ರೋಹಿತ್ ಶರ್ಮಾ

ಬೆಂಗಳೂರು: ಉದ್ಯಾನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಪ್ ಡ್ಲು ಪ್ಲೆಸಿಸ್ ಟಾಸ್ ಗೆದ್ದು ಮೊದಲಿಗೆ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯ ಉಭಯ ತಂಡಗಳು ಐಪಿಎಲ್ 2023 ಆವೃತ್ತಿಯ ಮೊದಲ ಪಂದ್ಯವಾಗಿದೆ. 

ಟಾಸ್ ಗೆದ್ದ ಬಳಿಕ ಮಾತನಾಡಿದ ಫಾಪ್ ಡು ಪ್ಲೆಸಿಸ್ ,ಇಂದಿನ ಪಂದ್ಯದೊಂದಿಗೆ ಶುಭಾರಂಭ ಮಾಡುವ ವಿಶ್ವಾಸವಿದೆ ಎಂದರು. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಪಿಚ್ ಉತ್ತಮವಾಗಿ ಕಾಣುತ್ತಿದೆ. ನಾಲ್ಕು ಮಂದಿ ವಿದೇಶಿ ಆಟಗಾರರು ತಮ್ಮ ತಂಡದಲ್ಲಿದ್ದು, ಸಕಾರಾತ್ಮಕ ಅಂಶದೊಂದಿಗೆ ಹೊರಗೆ ಬರುವುದಾಗಿ ತಿಳಿಸಿದರು.

ಆರ್ ಸಿಬಿ ತಂಡ ಇಂತಿದೆ: ವಿರಾಟ್ ಕೊಹ್ಲಿ, ಫಾಪ್ ಡ್ಲು ಪ್ಲೆಸಿಸ್, ಗ್ರೆನ್  ಮ್ಯಾಕ್ಸ್ ವೆಲ್,  ಮಿಚೆಲ್ ಬ್ರಾಸ್ ವೆಲ್, ಶಹಬಾಜ್ ಅಹ್ನದ್, ದಿನೇಶ್ ಕಾರ್ತಿಕ್, ಕರಣ್ ಶರ್ಮಾ, ಹರ್ಷ ಪಟೇಲ್, ಅಕ್ಷ ದೀಪ್, ರೀಸ್ ಟೊಪ್ಲಿ, ಮೊಹಮ್ಮದ್ ಸಿರಾಜ್.

ಮುಂಬೈ ಇಂಡಿಯನ್ಸ್ ತಂಡ ಇಂತಿದೆ: ರೋಹಿತ್ ಶರ್ಮಾ, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ಕ್ಯಾಮರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಲ್ ವದೇರಾ, ಹೃತಿಕ್ ಶೊಕೀನ್, ಪಿಯೂಷ್ ಚಾವ್ಲಾ, ಜೊಪ್ರಾ ಅರ್ಚೆರ್, ಅರ್ಷದ್ ಖಾನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com