IPL 2023: ಚೆನ್ನೈ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಪಂಜಾಬ್ ಕಿಂಗ್ಸ್ (PBKS) 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಪಂಜಾಬ್ ಕಿಂಗ್ಸ್ (PBKS) 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. 

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಪಂಜಾಬ್ ವಿಜಯದ ನಗೆ ಬೀರಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್‌ಕೆ ತಂಡ ನಿಗದಿತ ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತ್ತು. ಚೆನ್ನೈ ನೀಡಿದ 201 ರನ್ ಗಳ ಬೃಹತ್ ಮೊತ್ತವನ್ನ ಬೆನ್ನಟ್ಟಿದ ಪಂಜಾಬ್ ತಂಡ 6 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿ ಗೆಲುವಿನ ನಗೆ ಬೀರಿತು.

ಪಂಜಾಬ್ ಪರ ಶಿಖರ್ ಧವನ್ (28) ಮತ್ತು ಪ್ರಭಾಸಿಮ್ರಾನ್ ಸಿಂಗ್ (42) ಮೊದಲ ವಿಕೆಟ್‌ಗೆ 50 ರನ್ ಜೊತೆಯಾಟ ನಡೆಸಿದರು. ಐದನೇ ಎಸೆತದಲ್ಲಿ ಧವನ್ ಮತ್ತು ಒಂಬತ್ತನೇ ಓವರ್‌ನಲ್ಲಿ ಪ್ರಭಾಸಿಮ್ರನ್ ಔಟಾದರು. ಅಥರ್ವ ತಾಯ್ಡೆ (13) ಅವರ ಬ್ಯಾಟಿಂಗ್ ಹೆಚ್ಚು ಮಾಡಲಿಲ್ಲ. 11ನೇ ಓವರ್ ನಲ್ಲಿ ಪೆವಿಲಿಯನ್ ಗೆ ಮರಳಿದರು. ಲಿಯಾಮ್ ಲಿವಿಂಗ್‌ಸ್ಟೋನ್ (40) ವೇಗವಾಗಿ ಬ್ಯಾಟಿಂಗ್ ಮಾಡಿ ಪಂಜಾಬ್ ತಂಡವನ್ನು 150ರ ಗಡಿ ದಾಟಿಸಿದರು.

ಸ್ಯಾಮ್ ಕುರ್ರಾನ್ 29 ಮತ್ತು ಜಿತೇಶ್ ಶರ್ಮಾ 21 ರನ್ ಗಳಿಸಿದರು. ಪಂಜಾಬ್‌ನ 186 ರನ್‌ಗಳಿಗೆ 6 ವಿಕೆಟ್‌ಗಳು ಪತನಗೊಂಡವು, ನಂತರ ರಜಾ ಅಜೇಯ್ 13 ಮತ್ತು ಶಾರುಖ್ ಅಜೇಯ 2 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಚೆನ್ನೈ ಪರ ತುಷಾರ್ ದೇಶಪಾಂಡೆ ಮೂರು ಹಾಗೂ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರು. ಪತಿರಾನ ಒಂದು ವಿಕೆಟ್ ಪಡೆದರು.

ಚೆನ್ನೈ ಪರ ಡೆವೊನ್ ಕಾನ್ವೆ ಅತಿ ಹೆಚ್ಚು 52 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 91 ರನ್ ಗಳಿಸಿದರು. ರಿತುರಾಜ್ ಗಾಯಕ್ವಾಡ್ (37), ಶಿವಂ ದುಬೆ (28), ರವೀಂದ್ರ ಜಡೇಜಾ (12) ಮತ್ತು ಮೊಯಿನ್ ಅಲಿ ತಲಾ 10 ರನ್ ಕೊಡುಗೆ ನೀಡಿದರು. ಎಂಎಸ್ ಧೋನಿ 4 ಎಸೆತಗಳಲ್ಲಿ 13 ರನ್ ಗಳಿಸಿ ಅಜೇಯರಾಗಿ ಉಳಿದರು. 20ನೇ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ಸ್ಯಾಮ್ ಕರ್ರಾನ್, ಅರ್ಶ್ದೀಪ್ ಸಿಂಗ್, ರಾಹುಲ್ ಚಹಾರ್ ಮತ್ತು ಸಿಕಂದರ್ ರಜಾ ತಲಾ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com