ವಿಜಯ್ ಹಜಾರೆ ಟ್ರೋಫಿ 2023: ಎರಡನೇ ಶತಕ ದಾಖಲಿಸಿದ ದೇವದತ್ ಪಡಿಕ್ಕಲ್

ವಿಜಯ್ ಹಜಾರೆ ಟ್ರೋಫಿ 2023 ರಲ್ಲಿ ಕರ್ನಾಟಕ ತಂಡದ ದೇವದತ್ ಪಡಿಕ್ಕಲ್ ಅಬ್ಬರದ ಶತಕ ದಾಖಲಿಸಿದ್ದಾರೆ. 
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್

ಗುಜರಾತ್: ವಿಜಯ್ ಹಜಾರೆ ಟ್ರೋಫಿ 2023 ರಲ್ಲಿ ಕರ್ನಾಟಕ ತಂಡದ ದೇವದತ್ ಪಡಿಕ್ಕಲ್ ಅಬ್ಬರದ ಶತಕ ದಾಖಲಿಸಿದ್ದಾರೆ. 

ಗುಜರಾತ್ ನ ವಲ್ಲಭ್ ವಿದ್ಯಾನಗರ್ ನಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಪಡಿಕ್ಕಲ್ ಶತಕದ ನೆರವಿನಿಂದ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿ ಎದುರಾಳಿ ಚಂಡೀಗಢ ತಂಡಕ್ಕೆ 300 ರನ್ ಗಳ ಗುರಿ ನೀಡಿದೆ.
 
ಪಡಿಕ್ಕಲ್ 103 ಎಸೆತಗಳಲ್ಲಿ 6 ಸಿಕ್ಸ್ 9 ಬೌಂಡರಿಗಳ ಮೂಲಕ 114 ರನ್ ಗಳಿಸಿದರು.  ಮನೀಷ್ ಪಾಂಡೆ ಅಜೇಯ 53 ರನ್ ಗಳಿಸಿದರು. 

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಡಿಕ್ಕಲ್ ಅವರ ಎರಡನೇ ಶತಕ ಇದಾಗಿದೆ. ಚಂಡೀಗಢದ ಪರ  ಮನ್ ದೀಪ್ ಸಿಂಗ್ ಹಾಗೂ ಸಂದೀಪ್ ಶರ್ಮಾ ತಲಾ 2 ವಿಕೆಟ್, ಅಸ್ಲಾರ್ನ್ ಖಾನ್ ಹಾಗೂ ಮುರುಗನ್ ಅಶ್ವಿನ್ ತಲಾ ಒಂದು ವಿಕೆತ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com