ತವರಿಗೆ ಮರಳಿದ ವಿಶ್ವಕಪ್ ವಿಜೇತ ಭಾರತದ ಅಂಡರ್-19 ಮಹಿಳಾ ತಂಡ, ಅದ್ದೂರಿ ಸ್ವಾಗತ
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ 2023ರ ಐಸಿಸಿ ಅಂಡರ್ 19 ಮಹಿಳಾ ಟಿ-20 ವಿಶ್ವಕಪ್ ವಿಜೇತ ಭಾರತೀಯ ಆಟಗಾರ್ತಿಯರನ್ನು ಅದ್ದೂರಿ ಸ್ವಾಗತ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು.
Published: 02nd February 2023 12:56 PM | Last Updated: 27th February 2023 05:51 PM | A+A A-

ಭಾರತದ ಅಂಡರ್ -19 ಮಹಿಳಾ ಆಟಗಾರ್ತಿಯರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ
ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ 2023ರ ಐಸಿಸಿ ಅಂಡರ್ 19 ಮಹಿಳಾ ಟಿ-20 ವಿಶ್ವಕಪ್ ವಿಜೇತ ಭಾರತೀಯ ಆಟಗಾರ್ತಿಯರನ್ನು ಅದ್ದೂರಿ ಸ್ವಾಗತ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು.
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಶಫಾಲಿ ವರ್ಮಾ ನೇತೃತ್ವದ ತಂಡವನ್ನು ಬಿಸಿಸಿಐ ಬುಧವಾರ ಸನ್ಮಾನಿಸಿತ್ತು. ಇದಾದ ಒಂದು ದಿನದ ಬಳಿಕ ಇಂದು ತಂಡ ತವರಿಗೆ ಮರಳಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಟಗಾರ್ತಿ ಪಾರ್ಶವಿ ಚೋಪ್ರಾ, ತುಂಬಾ ಒಳ್ಳೆಯ ಅನುಭವವಾಗಿದೆ. ಭಾರತದ ಮಹಿಳಾ ತಂಡ ಮೊದಲ ಬಾರಿಗೆ U-19 ವಿಶ್ವಕಪ್ ಚಾಂಪಿಯನ್ ಆಗಿದೆ. ಇದು ಅದ್ಭುತವಾಗಿದೆ. ನನಗೆ ಸಿಗುವ ಯಾವುದೇ ಅವಕಾಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಅಲ್ಲದೇ, ತಮ್ಮ ದೇಶದ ಧ್ವಜವನ್ನು ಮೇಲ್ಭಾಗದಲ್ಲಿ ನೋಡುವುದಕ್ಕಿಂತ ದೊಡ್ಡ ಪ್ರೇರಣೆ ಇನ್ನೊಂದಿಲ್ಲ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಐತಿಹಾಸಿಕ ಸಾಧನೆ: ಭಾರತ ಮಹಿಳೆಯರ ಮುಡಿಗೆ ಚೊಚ್ಚಲ ಅಂಡರ್ 19 ಟಿ20 ವಿಶ್ವಕಪ್
ಗೆಲುವಿನ ಬಗ್ಗೆ ಮಾತನಾಡಿದ ಅರ್ಚನಾ ದೇವಿ, ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವುದು ನನ್ನ ಜೀವನದ ಅತ್ಯಂತ ದೊಡ್ಡ ದಿನವಾಗಿತ್ತು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಅವರ ಕನಸನ್ನು ಬೆನ್ನಟ್ಟಲು ಪ್ರೇರೇಪಿಸಬೇಕು ಎಂದು ತಿಳಿಸಿದರು.
"It was a great feeling talking to the legend Sachin Tendulkar. Our dreams have come true. Winning the trophy in the first Under-19 Women's World Cup is a very big thing for us. The entire team is filled with joy. We are preparing for the Women's IPL now," said the players pic.twitter.com/AWDG5uuAkJ
— ANI (@ANI) February 2, 2023
ಭಾರತ ತಂಡದ ಉಪನಾಯಕಿ ಶ್ವೇತಾ ಶೆರಾವತ್ ಅವರನ್ನು ವಿಮಾನ ನಿಲ್ದಾಣದಿಂದ ದಕ್ಷಿಣ ದೆಹಲಿಯ ತಮ್ಮ ಮನೆಯವರೆಗೂ ರೋಡ್ ಶೋ ನಡೆಸಿದ್ದಾರೆ. ಅವರು 19 ವರ್ಷದೊಳಗಿನವರ ಮಹಿಳಾ ಟಿ-20 ವಿಶ್ವಕಪ್‌ನಲ್ಲಿ ಏಳು ಪಂದ್ಯಗಳಲ್ಲಿ 99.00 ಸರಾಸರಿಯಲ್ಲಿ 297 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.
#WATCH | Greater Noida: India U19 Women's cricket team player Parshvi Chopra receives a grand welcome from her family and friends
— ANI (@ANI) February 2, 2023
India won the inaugural edition of the U19 ICC Women's World Cup in South Africa. pic.twitter.com/QZvx2gMxiV