ಭಾರತ-ಶ್ರೀಲಂಕಾ ಪಂದ್ಯದ ವೇಳೆ ಕ್ರೀಡಾಂಗಣ ಖಾಲಿ ಖಾಲಿ: ಕ್ರೀಡಾ ಸಚಿವರನ್ನು ತರಾಟೆಗೆ ತೆಗೆದುಕೊಂಡ ಶಶಿ ತರೂರ್

ಭಾನುವಾರ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದು ಈ ಹಿನ್ನೆಲೆಯಲ್ಲಿ ಕೇರಳ ಕ್ರೀಡಾ ಸಚಿವರ ವಿರುದ್ಧ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ.
ಭಾರತ-ಲಂಕಾ ಪಂದ್ಯ
ಭಾರತ-ಲಂಕಾ ಪಂದ್ಯ

ತಿರುವನಂತಪುರಂ: ಭಾನುವಾರ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದು ಈ ಹಿನ್ನೆಲೆಯಲ್ಲಿ ಕೇರಳ ಕ್ರೀಡಾ ಸಚಿವರ ವಿರುದ್ಧ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ. 

ಟಿಕೆಟ್ ದರದ ಬಗ್ಗೆ ಕೇರಳ ಕ್ರೀಡಾ ಸಚಿವ ವಿ.ಅಬ್ದುರಹಿಮನ್‌ ರ ಇತ್ತೀಚಿನ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ದೂಷಿಸಿದೆ. ಆದರೆ ಸಿಪಿಐ(ಎಂ) ಅದರಲ್ಲಿ ಏನು ತಪ್ಪಿಲ್ಲ ಎಂದು ವಾದಿಸಿದೆ.

ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ಏನೇ ಹೇಳಿದರೂ ಜನರು ಪಂದ್ಯಕ್ಕೆ ಬರುವುದನ್ನು ತಪ್ಪಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. 'ಜನರು ಬರದಿರುವುದರಿಂದ ಸಚಿವರಿಗೆ ಏನು ನಷ್ಟವಲ್ಲ. ಆದರೆ ಇದು ಕ್ರಿಕೆಟ್ ಮತ್ತು ಕ್ರೀಡೆಯನ್ನು ಪ್ರೀತಿಸುವವರಿಗೆ ನಷ್ಟ' ಎಂದು ತರೂರ್ ಹೇಳಿದ್ದಾರೆ.

ಇನ್ನು ಏಕದಿನ ಪಂದ್ಯದ ಟಿಕೆಟ್ ದರ ವಿಪರೀತವಾಗಿದೆ ಎಂದು ವಿವಿಧ ವಲಯಗಳಿಂದ ಟೀಕೆಗಳು ಕೇಳಿಬರುತ್ತಿರುವುದರ ನಡುವೆ, ಅಬ್ದುರಹಿಮಾನ್ ಅದನ್ನು ಭರಿಸಲಾಗದವರು ಪಂದ್ಯ ವೀಕ್ಷಿಸಲು ಹೋಗಬೇಕಾಗಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

ತೆರಿಗೆ ಇಳಿಸುವ ಅಗತ್ಯ ಏನಿದೆ? ದೇಶವೇ ಬೆಲೆ ಏರಿಕೆಯ ವಿದ್ಯಮಾನವನ್ನು ನೋಡುತ್ತಿದ್ದು, ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆಯಿದೆ, ಹಸಿವಿನಿಂದ ಬಳಲುತ್ತಿರುವವರು ಪಂದ್ಯ ವೀಕ್ಷಿಸಲು ಹೋಗಬೇಕಾಗಿಲ್ಲ ಎಂದು ಸಚಿವರು ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಸಚಿವರು ಆ ರೀತಿ ಹೇಳಿಕೆಯನ್ನು ಕೊಡಬಾರದಿತ್ತು. ಇನ್ನು ಸಾರ್ವಜನಿಕರು ಪಂದ್ಯವನ್ನು ಬಹಿಷ್ಕರಿಸಬಾರದು ಎಂದು ಹೇಳಿದರು.

'ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪ್ರಚಾರಗಳನ್ನು ನಾನು ನೋಡಿದೆ. ಅವರ ಪ್ರಚಾರವು ಪರಿಣಾಮಕಾರಿಯಾಗಿದೆ ಎಂದು ತೋರುತ್ತಿದೆ. ಅದನ್ನು ಬಹಿಷ್ಕರಿಸುವುದು ತರ್ಕಬದ್ಧವಲ್ಲ ಎಂದು ನಾನು ಭಾವಿಸುತ್ತೇನೆ. ಪಂದ್ಯವನ್ನು ವೀಕ್ಷಿಸಲು ನಾನು ಅದೃಷ್ಟಶಾಲಿಯಾಗಿದ್ದೆ, ಮತ್ತು ಇಲ್ಲಿಗೆ ಬಂದವರೂ ಕೂಡ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.

ಅಬ್ದು ರಹಿಮಾನ್ ಅವರು ತಮ್ಮ ಹೇಳಿಕೆಯಿಂದ ಮಲಯಾಳಿಗಳ ಸ್ವಾಭಿಮಾನವನ್ನು ಪ್ರಶ್ನಿಸಬಾರದಿತ್ತು ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಕೂಡ ಸಚಿವರನ್ನು ದೂಷಿಸಿದ್ದಾರೆ. ಸಚಿವರ 'ಹಸಿವು' ಹೇಳಿಕೆಯು ಖಾಲಿ ಗ್ಯಾಲರಿಗಳ ಮುಂದೆ ಪಂದ್ಯವನ್ನು ಆಡುವಂತೆ ಮಾಡಿದೆ ಎಂದು ಸತೀಶನ್ ಹೇಳಿದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್, ಅಬ್ದುರಹಿಮಾನ್ ಕೇವಲ ಬಡವರು ಬಂದು ಪಂದ್ಯ ವೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ಸಚಿವರ ಸಹಾಯಕ್ಕೆ ಬಂದರು.

ಕೇರಳದ ರಾಜಧಾನಿಯಲ್ಲಿರುವ ಗ್ರೀನ್‌ಫೀಲ್ಡ್ ಸ್ಟೇಡಿಯಂ (55,000 ಪ್ರೇಕ್ಷಕರು) 10,000 ಕ್ಕಿಂತ ಕಡಿಮೆ ಜನರ ಹಾಜರಾತಿಯನ್ನು ದಾಖಲಿಸಿದೆ ಎಂದು ಹೇಳಲಾಗುತ್ತದೆ. 

ಇನ್ನು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಲಂಕಾವನ್ನು ಕ್ಲೀನ್ ಸ್ವಿಪ್ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com