ಸೂರ್ಯ ಕುಮಾರ್ ಯಾದವ್ ಗೆ 'ಐಸಿಸಿ ವರ್ಷದ ಟಿ-20 ಕ್ರಿಕೆಟಿಗ' ಪ್ರಶಸ್ತಿ
ಟೀಂ ಇಂಡಿಯಾದ ಇತ್ತೀಚಿನ ಸೆನ್ಸೆಷನ್ ಬ್ಯಾಟ್ಸ್ ಮನ್ ಸೂರ್ಯ ಕುಮಾರ್ ಯಾದವ್ ಐಸಿಸಿ ಪುರುಷರ ಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಟಿ-20 ಮಾದರಿಯಲ್ಲಿ ಹೆಚ್ಚಿನ ರನ್ ಗಳಿಸಿದ ನಂತರ 32 ವರ್ಷದ ಸೂರ್ಯಕುಮಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Published: 26th January 2023 12:37 AM | Last Updated: 26th January 2023 10:01 PM | A+A A-

ಸೂರ್ಯ ಕುಮಾರ್ ಯಾದವ್
ನವದೆಹಲಿ: ಟೀಂ ಇಂಡಿಯಾದ ಇತ್ತೀಚಿನ ಸೆನ್ಸೆಷನ್ ಬ್ಯಾಟ್ಸ್ ಮನ್ ಸೂರ್ಯ ಕುಮಾರ್ ಯಾದವ್ ಐಸಿಸಿ ಪುರುಷರ ಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಟಿ-20 ಮಾದರಿಯಲ್ಲಿ ಹೆಚ್ಚಿನ ರನ್ ಗಳಿಸಿದ ನಂತರ 32 ವರ್ಷದ ಸೂರ್ಯಕುಮಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೂರ್ಯ ಕುಮಾರ್ ಯಾದವ್ ಈ ರೇಸ್ ನಲ್ಲಿ ಟಿ-20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಸ್ಯಾಮ್ ಕರನ್, ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಜಿಂಬಾಬ್ವೆಯ ಆಲ್ ರೌಂಡರ್ ಸಿಕಂದರ್ ರಾಜಾ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: ಭಾರತದ ರೇಣುಕಾ ಸಿಂಗ್ ಗೆ 'ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ' ಪ್ರಶಸ್ತಿ
ಆದರೆ, ಭಾರತ ಮಹಿಳಾ ತಂಡದ ಉಪನಾಯಕಿ ಹಾಗೂ ಕಳೆದ ವರ್ಷದ ‘ವರ್ಷದ ಆಟಗಾರ್ತಿ ಪ್ರಶಸ್ತಿ ಪಡೆದಿದ್ದ’ ಸ್ಮೃತಿ ಮಂಧಾನ ಮಹಿಳಾ ವಿಭಾಗದಲ್ಲಿ ಆಸ್ಟ್ರೇಲಿಯದ ತಹ್ಲಿಯಾ ಮೆಕ್‌ಗ್ರಾತ್ ಎದುರು ಸೋತರು.
2022ರಲ್ಲಿ ಸೂರ್ಯಕುಮಾರ್ ಯಾದವ್ ಟಿ-20 ಕ್ರಿಕೆಟ್ ನಲ್ಲಿ ಸಾವಿರಕ್ಕಿಂತಲೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಅವರು 187. 43ರ ಸ್ಟ್ರೈಕ್ ರೇಟ್ ನಲ್ಲಿ 1,164 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಜೊತೆಗೆ ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.