ಪಂಜಾಬ್‌ನ ಕ್ರೀಡಾ ಸಚಿವರಾಗಿ ಪಾಕ್ ವೇಗಿ ವಹಾಬ್ ರಿಯಾಜ್ ಆಯ್ಕೆ
ಬಾಂಗ್ಲಾದೇಶದಲ್ಲಿ ಫ್ರಾಂಚೈಸ್ ಲೀಗ್ ಆಡುತ್ತಿರುವ ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದ್ದು ವಹಾಬ್ ರಿಯಾಜ್ ಅವರನ್ನು ಪಾಕಿಸ್ತಾನದ ಪಂಜಾಬ್ ರಾಜ್ಯದ ಕ್ರೀಡಾ ಸಚಿವರನ್ನಾಗಿ ಮಾಡಲಾಗಿದೆ.
Published: 27th January 2023 04:53 PM | Last Updated: 28th January 2023 03:48 PM | A+A A-

ವಹಾಬ್ ರಿಯಾಜ್
ಬಾಂಗ್ಲಾದೇಶದಲ್ಲಿ ಫ್ರಾಂಚೈಸ್ ಲೀಗ್ ಆಡುತ್ತಿರುವ ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದ್ದು ವಹಾಬ್ ರಿಯಾಜ್ ಅವರನ್ನು ಪಾಕಿಸ್ತಾನದ ಪಂಜಾಬ್ ರಾಜ್ಯದ ಕ್ರೀಡಾ ಸಚಿವರನ್ನಾಗಿ ಮಾಡಲಾಗಿದೆ.
ವಹಾಬ್ ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಈಗ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ವಹಾಬ್ ರಿಯಾಜ್ ಅವರು ಪಾಕಿಸ್ತಾನಕ್ಕೆ ಬಂದ ತಕ್ಷಣ ಕ್ರೀಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಹಾಬ್ 2019ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ನಂತರ 2020ರಿಂದ, ಅವರಿಗೆ ODI ಮತ್ತು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶವೂ ಸಿಕ್ಕಿಲ್ಲ. ವಹಾಬ್ ಪಾಕಿಸ್ತಾನದ ಪರ 27 ಟೆಸ್ಟ್, 91 ODI ಮತ್ತು 36 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು ಟೆಸ್ಟ್‌ನಲ್ಲಿ 83, ODIಗಳಲ್ಲಿ 120 ಮತ್ತು T20 ಅಂತರರಾಷ್ಟ್ರೀಯಗಳಲ್ಲಿ 34 ವಿಕೆಟ್‌ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಐಸಿಸಿ ಪ್ರಶಸ್ತಿ ಪ್ರಕಟ: ಪಾಕ್ ನಾಯಕ ಬಾಬರ್ ಅಜಮ್ ಗೆ ಡಬಲ್ ಖುಷಿ
ಟಿ20ಯಲ್ಲಿ 400 ವಿಕೆಟ್ ಪಡೆದ ಆರನೇ ಬೌಲರ್ ವಹಾಬ್
ವಹಾಬ್ ರಿಯಾಜ್ ಇತ್ತೀಚೆಗೆ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಕೆಲವು ದಿನಗಳ ಹಿಂದೆ, ಅವರು T20 ಮಾದರಿಯಲ್ಲಿ 400 ವಿಕೆಟ್‌ಗಳನ್ನು ಪಡೆದ ವಿಶ್ವದ ಆರನೇ ಬೌಲರ್ ಆಗಿದ್ದರು. ವಹಾಬ್ ಹೊರತುಪಡಿಸಿ ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ ಮತ್ತು ಸುನಿಲ್ ನರೈನ್, ಅಫ್ಘಾನಿಸ್ತಾನದ ರಶೀದ್ ಖಾನ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮತ್ತು ಇಮ್ರತ್ ತಾಹಿಲ್ ಈ ಕ್ಲಬ್‌ಗೆ ಸೇರಿದ್ದಾರೆ.