ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ: ಬೆಂಗಳೂರಿನ ಅಲೂರಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತರಬೇತಿ
ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದೆ. ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಗೂ ಮುನ್ನಾ ಬೆಂಗಳೂರಿಗೆ ಆಗಮಿಸಲಿರುವ ಪ್ಯಾಟ್ ಕಮಿನ್ಸ್ ಪಡೆ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ತರಬೇತಿ ಪಡೆಯಲಿದೆ.
Published: 31st January 2023 03:39 PM | Last Updated: 31st January 2023 06:51 PM | A+A A-

ಆಸ್ಟ್ರೇಲಿಯಾ ತಂಡ ನಾಯಕ ಪ್ಯಾಟ್ ಕಮ್ಮಿಸ್
ಚೆನ್ನೈ: ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದೆ. ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಗೂ ಮುನ್ನಾ ಬೆಂಗಳೂರಿಗೆ ಆಗಮಿಸಲಿರುವ ಪ್ಯಾಟ್ ಕಮಿನ್ಸ್ ಪಡೆ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ತರಬೇತಿ ಪಡೆಯಲಿದೆ.
ಅಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ತಂಡಕ್ಕಾಗಿ ನಾಲ್ಕು ದಿನಗಳ ಶಿಬಿರವು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಉಸ್ತುವಾರಿಯಲ್ಲಿ ನಡೆಯಲಿದೆ. ಅಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಆದರೆ ಶಿಬಿರವನ್ನು ಎನ್‌ಸಿಎ ವ್ಯವಸ್ಥೆ ಮಾಡುತ್ತದೆ ಮತ್ತು ನೋಡಿಕೊಳ್ಳುತ್ತದೆ ಎಂದು ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಪದಾಧಿಕಾರಿಯೊಬ್ಬರು ಹೇಳಿದರು.
ಆಸ್ಟ್ರೇಲಿಯಾ ಟೀಮ್ ಮ್ಯಾನೇಜ್ ಮೆಂಟ್ ಮಾಡಿರುವ ವೇಳಾಪಟ್ಟಿ ಮತ್ತಿತರ ಕೋರಿಕೆಗಳು ಎನ್ ಸಿಎಗೆ ಮಾತ್ರ ತಿಳಿದಿದ್ದು, ಅವರು ಎನ್‌ಸಿಎ ಅಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದರು. ಭಾರತವು 2020-21ರಲ್ಲಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದ್ದರಿಂದ ಟ್ರೋಫಿಯನ್ನು ಹೊಂದಿದೆ.
ವಿದರ್ಭ ಕ್ರಿಕೆಟ್ ಸಂಸ್ಥೆ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಿಕೊಂಡಿದ್ದು, ವೇಗಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ತಂಡವು ನಾಗ್ಪುರ ತಲುಪುವ ಮೊದಲು ಬೆಂಗಳೂರಿನಲ್ಲಿ ತರಬೇತಿ ಪಡೆಯಲಿದೆ ಎಂದು ಖಚಿತಪಡಿಸಿದೆ. ಆಸೀಸ್ ತಂಡ ಫೆಬ್ರುವರಿ 6 ರಂದು ನಾಗ್ಪುರ ತಲುಪುವ ನಿರೀಕ್ಷೆಯಿದೆ.
ಇದನ್ನೂ ಓದಿ: ಐತಿಹಾಸಿಕ ಸಾಧನೆ: ಭಾರತ ಮಹಿಳೆಯರ ಮುಡಿಗೆ ಚೊಚ್ಚಲ ಅಂಡರ್ 19 ಟಿ20 ವಿಶ್ವಕಪ್
ಫೆಬ್ರವರಿ 7 ಮತ್ತು 8 ರಂದು ಇಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ಆದಾಗ್ಯೂ, ನಾವು ಕೂಡ ಮಾಡಬೇಕಾಗಿರುವುದರಿಂದ ಶೀಘ್ರದಲ್ಲೇ ಅದು ದೃಢಪಡುವ ನಿರೀಕ್ಷೆಯಿದೆ. ಭದ್ರತೆ, ಅಭ್ಯಾಸ ಪಿಚ್‌ಗಳು ಮತ್ತು ಇತರ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿಸಿಎ ಮೂಲಗಳು ತಿಳಿಸಿವೆ.
ರೋಹಿತ್ ಶರ್ಮಾ ನೇತೃತ್ವದ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ನಿರ್ಧರಿಸಲಿದ್ದು, ಆಸೀಸ್ ತಂಡದಿಂದ ಕೆಲವು ಸವಾಲುಗಳನ್ನು ನಿರೀಕ್ಷಿಸಬಹುದು. ಎರಡನೇ ಟೆಸ್ಟ್ ಫೆಬ್ರವರಿ 17 ರಿಂದ 21 ರವರೆಗೆ ದೆಹಲಿಯಲ್ಲಿ ನಿಗದಿಯಾಗಿದೆ. ಮಾರ್ಚ್ 1 ರಂದು ಪ್ರಾರಂಭವಾಗುವ ಮೂರನೇ ಪಂದ್ಯವನ್ನು ಧರ್ಮಶಾಲಾ ಆಯೋಜಿಸಲಿದೆ ಮತ್ತು ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಮಾರ್ಚ್ 9 ರಿಂದ 13 ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ಮೂರು ಏಕದಿನ ಪಂದ್ಯಗಳನ್ನು ಕೂಡಾ ಆಡಲಿದೆ - ಮೊದಲನೆಯದು ಮಾರ್ಚ್ 17 ರಂದು ಮುಂಬೈನಲ್ಲಿ ನಡೆಯಲಿದೆ. ಎರಡನೇ ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ವಿಶಾಖಪಟ್ಟಣಂ ಮತ್ತು ಚೆನ್ನೈನಲ್ಲಿ ಮಾರ್ಚ್ 19 ಮತ್ತು 22 ರಂದು ನಡೆಯಲಿವೆ.