ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದ ಮೊಹಮ್ಮದ್ ಸಿರಾಜ್!
ಟೀಂ ಇಂಡಿಯಾದ ವೇಗಿ ಟೆಸ್ಟ್ ಕ್ರಿಕೆಟ್ ನಲ್ಲಿ 50 ವಿಕೆಟ್ ಪೂರೈಸಿದ್ದಾರೆ. ಓವೆಲ್ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನ ಎರಡನೇ ದಿನದಾಟದ ವೇಳೆ ಸಿರಾಜ್ ಈ ಸಾಧನೆ ಮಾಡಿದರು.
Published: 09th June 2023 01:32 AM | Last Updated: 09th June 2023 06:55 PM | A+A A-

ಮೊಹಮ್ಮದ್ ಸಿರಾಜ್
ಲಂಡನ್: ಟೀಂ ಇಂಡಿಯಾದ ವೇಗಿ ಟೆಸ್ಟ್ ಕ್ರಿಕೆಟ್ ನಲ್ಲಿ 50 ವಿಕೆಟ್ ಪೂರೈಸಿದ್ದಾರೆ. ಓವೆಲ್ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನ ಎರಡನೇ ದಿನದಾಟದ ವೇಳೆ ಸಿರಾಜ್ ಈ ಸಾಧನೆ ಮಾಡಿದರು.
29 ವರ್ಷದ ಬಲಗೈ ವೇಗಿ 28.3 ಓವರ್ ಗಳಲ್ಲಿ 108 ರನ್ ಗಳಿಗೆ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಭಾರತದ ಪರ ಅದ್ವಿತೀಯ ಪ್ರದರ್ಶನ ನೀಡಿದರು.
ಇದನ್ನೂ ಓದಿ: WTC ಫೈನಲ್, 2ನೇ ದಿನದಾಟ ಅಂತ್ಯಕ್ಕೆ ಭಾರತ 151/5, 318 ರನ್ ಗಳ ಹಿನ್ನಡೆ
ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಿಯಾನ್ ಅವರನ್ನು ಫೆವಿಲಿಯನ್ ಹಾದಿ ತೋರಿಸಿದ ಸಿರಾಜ್, ಕೇವಲ 19 ಟೆಸ್ಟ್ ಗಳಲ್ಲಿ 30.96 ಸರಾಸರಿಯೊಂದಿಗೆ 50 ವಿಕೆಟ್ ಪಡೆದ ಶ್ರೇಯಸ್ಸಿಗೆ ಪಾತ್ರರಾದರು.
ಸದ್ಯ ಅವರು ಗಳಿಸಿರುವ 51 ವಿಕೆಟ್ ಪೈಕಿ 38 ವಿಕೆಟ್ ಗಳನ್ನು ವಿದೇಶ ನೆಲದಲ್ಲಿಯೇ ಪಡೆದಿದ್ದಾರೆ. ಇಂಗ್ಲೇಡ್ ನಲ್ಲಿ ಆಡಿದ ಆರ್ ಟೆಸ್ಟ್ ಗಳಲ್ಲಿ 31.90 ಸರಾಸರಿಯಲ್ಲಿ 22 ವಿಕೆಟ್ ಪಡೆದಿದ್ದಾರೆ.