ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು: ಏಕದಿನ ವಿಶ್ವಕಪ್ ಗೆ ನೇರ ಅರ್ಹತೆ ಪಡೆಯುವಲ್ಲಿ ಲಂಕಾಗೆ ಹಿನ್ನಡೆ!

ವೇಗಿ ಹೆನ್ರಿ ಶಿಪ್ಲಿ ಭರ್ಜರಿ ಐದು ವಿಕೆಟ್ ಕಬಳಿಸುವ ಮೂಲಕ ಲಂಕಾ ವಿರುದ್ಧ ನ್ಯೂಜಿಲೆಂಡ್ ಗೆ ಅಮೋಘ ಜಯ ತಂದುಕೊಟ್ಟಿದ್ದಾರೆ. 
ಲಂಕಾ ತಂಡ
ಲಂಕಾ ತಂಡ
Updated on

ಆಕ್ಲೆಂಡ್: ವೇಗಿ ಹೆನ್ರಿ ಶಿಪ್ಲಿ ಭರ್ಜರಿ ಐದು ವಿಕೆಟ್ ಕಬಳಿಸುವ ಮೂಲಕ ಲಂಕಾ ವಿರುದ್ಧ ನ್ಯೂಜಿಲೆಂಡ್ ಗೆ ಅಮೋಘ ಜಯ ತಂದುಕೊಟ್ಟಿದ್ದಾರೆ. 

ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 198 ರನ್‌ಗಳಿಂದ ಸೋಲು ಅನುಭವಿಸಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಹಿನ್ನಡೆ ಸಾಧಿಸಿದೆ. ಇನ್ನು ಪುರುಷರ ಏಕದಿನ ಪಂದ್ಯದಲ್ಲಿ  ಶ್ರೀಲಂಕಾ ವಿರುದ್ಧ (198 ರನ್‌ಗಳ ಗೆಲುವು) ನ್ಯೂಜಿಲ್ಯಾಂಡ್ ಗಳಿಸಿದ ಅತಿ ದೊಡ್ಡ ಗೆಲುವು ಇದಾಗಿದೆ.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು 22 ಪಂದ್ಯಗಳಿಂದ 160 ಅಂಕಗಳನ್ನು ಗಳಿಸಿದ್ದಾರೆ. ಒಂದೇ ವೇಳೆ ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಸಾಧಿಸಿದರೆ ನ್ಯೂಜಿಲ್ಯಾಂಡ್ ತಂಡ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ, ICC ಪುರುಷರ ODI ತಂಡ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರುತ್ತಾರೆ.

ಈ ಸೋಲು ವಿಶ್ವಕಪ್ ಗೆ ಶ್ರೀಲಂಕಾದ ನೇರ ಅರ್ಹತೆಗೆ ಮತ್ತಷ್ಟು ಹೊಡೆತ ಬಿದ್ದಿದೆ. ಲಂಕಾ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು 77 ಅಂಕ ಗಳಿಸಿದ್ದಾರೆ. ಸೂಪರ್ ಲೀಗ್‌ನಲ್ಲಿನ ಅಗ್ರ ಎಂಟು ತಂಡಗಳು ಮಾತ್ರ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ನೇರ ಅರ್ಹತೆಯನ್ನು ಪಡೆಯಲಿವೆ. ಶ್ರೀಲಂಕಾ ಸರಣಿಯಲ್ಲಿ ಮುಂದಿನ ಎರಡು ODIಗಳನ್ನು ಗೆದ್ದರೂ, ನೇರ ಅರ್ಹತೆಗಾಗಿ ಅವರು ಇತರ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 49.3 ಓವರ್‌ಗಳಲ್ಲಿ 274 ರನ್‌ಗಳಿಗೆ ಆಲೌಟ್ ಆಗಿತ್ತು. 275 ರನ್ ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 19.5 ಓವರ್‌ಗಳಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗಿದ್ದು ಈ ಮೂಲಕ ಶ್ರೀಲಂಕಾ ತಂಡ 198 ರನ್‌ಗಳ ಬೃಹತ್ ಅಂತರದಿಂದ ಸೋಲು ಕಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com