ಐಪಿಎಲ್ 2023: ಪಂಜಾಬ್ಸ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ ಆರು ವಿಕೆಟ್ ಗಳ ಭರ್ಜರಿ ಗೆಲುವು
ತವರು ನೆಲದಲ್ಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲಾಗಿದೆ. ಹೌದು ಮೊಹಾಲಿಯಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ 2023ರ ಆವೃತ್ತಿಯ 46ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆರು ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
Published: 04th May 2023 12:33 AM | Last Updated: 04th May 2023 12:35 AM | A+A A-

ಇಶಾನ್ ಕಿಶಾನ್, ಸೂರ್ಯ ಕುಮಾರ್ ಯಾದವ್
ಮೊಹಾಲಿ: ತವರು ನೆಲದಲ್ಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲಾಗಿದೆ. ಹೌದು ಮೊಹಾಲಿಯಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ 2023ರ ಆವೃತ್ತಿಯ 46ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆರು ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಆಟಗಾರ ಶಿಖರ್ ಧವನ್ 30 ರನ್ ಗಳಿಸಿದರೆ, ಮ್ಯಾಥ್ಯೂ ಶೊರ್ಟ್ 27, ಲೈಮ್ ಲಿವಿಂಗ್ ಸ್ಟೊನ ಅಜೇಯ 82, ಜಿತೇಶ್ ಶರ್ಮಾ ಅಜೇಯ 49 ರನ್ ಗಳಿಸುವ ಮೂಲಕ ತಂಡ 200 ರ ಗಡಿ ದಾಟಿತು. ಮುಂಬೈ ಇಂಡಿಯನ್ಸ್ ಪರ ಅರ್ಷದ್ ಖಾನ್ 1 ವಿಕೆಟ್ ಪಡೆದರೆ, ಪಿಯೂಷ್ ಚಾವ್ಲಾ 2 ವಿಕೆಟ್ ಕಬಳಿಸಿದರು.
ಪಂಜಾಬ್ ಕಿಂಗ್ಸ್ ನೀಡಿದ 215 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
EK NUMBERRRRRRRRRRR CHASE, ONCE AGAIN! #OneFamily #PBKSvMI #MumbaiMeriJaan #MumbaiIndians #TATAIPL #IPL2023 pic.twitter.com/4DKYOkB0VN
— Mumbai Indians (@mipaltan) May 3, 2023
ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರೆ ಇಶಾನ್ ಕಿಶಾನ್ ಆಕರ್ಷಕ 75, ಕ್ಯಾಮರೊನ್ ಗ್ರೀನ್ 23, ಸೂರ್ಯಕುಮಾರ್ ಯಾದವ್ 66, ಟಿಮ್ ಡೇವಿಡ್ 19, ತಿಲಕ್ ವರ್ಮಾ 26 ರನ್ ಗಳಿಸಿದರು. ಇಶಾನ್ ಕಿಶಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.