IPL 2023: ಮುಂಬೈ ವಿರುದ್ಧ ಸೋತ ಆರ್ ಸಿಬಿ; ಬೆಂಗಳೂರು ಪ್ಲೇ ಆಫ್ ಕನಸು ದೂರ
ಐಪಿಎಲ್ 2023ರ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಮಣಿಸಿದೆ.
Published: 09th May 2023 11:49 PM | Last Updated: 09th May 2023 11:49 PM | A+A A-

ಆರ್ ಸಿಬಿ ತಂಡ
ಮುಂಬೈ: ಐಪಿಎಲ್ 2023ರ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಮಣಿಸಿದೆ.
ಆರ್ ಸಿಬಿ ನೀಡಿದ 200 ರನ್‌ಗಳ ಗುರಿ ಪಡೆದ ಮುಂಬೈ ಕೇವಲ 16.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ (35 ಎಸೆತದಲ್ಲಿ 7 ಬೌಂಡರಿ, 6 ಸಿಕ್ಸರ್ ನೆರವಿನಿಂದ 83 ರನ್) ಬಿರುಸಿನ ಇನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ನೆಹಾಲ್ ವಧೇರಾ 34 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಸೂರ್ಯ ಮತ್ತು ನೇಹಾಲ್ ಮೂರನೇ ವಿಕೆಟ್‌ಗೆ 140 ರನ್‌ಗಳ ಬಲವಾದ ಜೊತೆಯಾಟವಾಡಿದರು.
ಇದನ್ನೂ ಓದಿ: IPL 2023: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ 5 ವಿಕೆಟ್ ರೋಚಕ ಗೆಲುವು
ಗುರಿ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆಯಿತು. ಇಶಾನ್ ಕಿಶನ್ 21 ಎಸೆತಗಳಲ್ಲಿ 42 ರನ್ ಹಾಗೂ ರೋಹಿತ್ ಶರ್ಮಾ 8 ಎಸೆತಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತರಾದರು. ಹಸರಂಗ ಅವರು ಐದನೇ ಓವರ್‌ನಲ್ಲಿ ಇಶಾನ್ ಮತ್ತು ರೋಹಿತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಸೂರ್ಯ ಮತ್ತು ನೇಹಾಲ್ ಮುನ್ನಡೆ ಸಾಧಿಸಿ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದ್ದರು. ಕೊನೆಯಲ್ಲಿ ಹರ್ಷಲ್ ವಿರುದ್ಧ ಸಿಕ್ಸರ್ ಬಾರಿಸುವ ಮೂಲಕ ನೆಹಾಲ್ ಮುಂಬೈಗೆ ಜಯ ತಂದುಕೊಟ್ಟರು.
ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. ಫಾಫ್ ಡುಪ್ಲೆಸಿ (65) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (68) ಅರ್ಧಶತಕ ಇನಿಂಗ್ಸ್ ಆಡಿದರು. ದಿನೇಶ್ ಕಾರ್ತಿಕ್ 30 ರನ್ ಕೊಡುಗೆ ನೀಡಿದರು. ವಿರಾಟ್ ಕೊಹ್ಲಿ (1) ಬ್ಯಾಟಿಂಗ್ ಮಾಡಲಿಲ್ಲ. ಮುಂಬೈ ಪರ ಬೆಹ್ರೆಂಡಾರ್ಫ್ ಮೂರು ವಿಕೆಟ್ ಪಡೆದರು.