IPL 2023: ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ ಭರ್ಜರಿ ಗೆಲುವು!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್ 2023)ನಲ್ಲಿ ಸತತ ಗೆಲುವಿನ ಓಟ ಮುಂದೂವರೆಸಿರುವ ಮುಂಬೈ ಇಂಡಿಯನ್ಸ್ ತಂಡ ಇದೀಗ ಗುಜರಾತ್ ಟೈಟಾನ್ಸ್ ತಂಡವನ್ನು 27 ರನ್ ಗಳಿಂದ ಮಣಿಸಿದೆ.
Published: 13th May 2023 12:01 AM | Last Updated: 13th May 2023 12:01 AM | A+A A-

ಸಂಗ್ರಹ ಚಿತ್ರ
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್ 2023)ನಲ್ಲಿ ಸತತ ಗೆಲುವಿನ ಓಟ ಮುಂದೂವರೆಸಿರುವ ಮುಂಬೈ ಇಂಡಿಯನ್ಸ್ ತಂಡ ಇದೀಗ ಗುಜರಾತ್ ಟೈಟಾನ್ಸ್ ತಂಡವನ್ನು 27 ರನ್ ಗಳಿಂದ ಮಣಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ದಾಖಲಿಸಿತ್ತು. ಮುಂಬೈ ಪರ ಇಶಾನ್ ಕಿಶನ್ 31, ರೋಹಿತ್ ಶರ್ಮಾ 29, ವಿಷ್ಣು ವಿನೋದ್ 30 ಮತ್ತು ಸೂರ್ಯಕುಮಾರ್ ಅಜೇಯ 103 ರನ್ ಪೇರಿಸಿದ್ದರು.
219 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಷ್ಟೇ ಸಾಧ್ಯವಾಯಿತು. ಟೈಟಾನ್ಸ್ ಪರ ವಿಜಯ್ ಶಂಕರ್ 29, ಡೇವಿಡ್ ಮಿಲ್ಲರ್ 41 ಮತ್ತು ರಶೀದ್ ಖಾನ್ ಅಜೇಯ 79 ರನ್ ಪೇರಿಸಿದ್ದಾರೆ.
ಐಪಿಎಲ್ ಪ್ರಸ್ತುತ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 12 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು 8 ಪಂದ್ಯಗಳ ಗೆಲುವಿನ ಮೂಲಕ ಗುಜರಾತ್ ಟೈಟಾನ್ಸ್ ಅಗ್ರಸ್ಥಾನದಲ್ಲಿದೆ.