
ಮುಂಬೈ ವಿರುದ್ಧ ಲಖ್ನೌ ತಂಡಕ್ಕೆ 5 ರನ್ ಗಳ ರೋಚಕ ಜಯ-
ಲಖನೌ: ಲಖನೌ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ, ಲಖನೌ ಜೈಂಟ್ಸ್ 5 ವಿಕೆಟ್ ಗಳ ರೋಚಕ ಜಯ ಗಳಿಸಿದೆ.
ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಲಖ್ನೌ ತಂಡ ಪ್ಲೇ ಆಫ್ ಹಾದಿ ಸುಗಮವಾಗಿದ್ದರೆ, ರಾಯಲ್ ಚಾಲೆಂಜರ್ಸ್ ತಂಡದ ಪ್ಲೇ ಆಫ್ ಕನಸಿಗೆ ತಣ್ಣೀರು ಬೀಳುವ ಸಾಧ್ಯತೆ ಇದೆ. ಮಾರ್ಕಸ್ ಸ್ಟೋಯ್ನಿಸ್ (Marcus Stoinis) ಅಬ್ಬರದ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ಲೈನ್ ನ ಸಹಕಾರದಿಂದ ಲಖನೌ ತಂಡ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತ್ತು. 178 ರನ್ ಗುರಿ ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರೋಚಕ ಪಂದ್ಯದಲ್ಲಿ ಕೊನೆಯ 2 ಓವರ್ ಗಳಿರುವಾಗ ಮುಂಬೈ ತಂಡಕ್ಕೆ ಗೆಲ್ಲಲು 30 ರನ್ ಗಳು ಅಗತ್ಯವಿತ್ತು. 19 ನೇ ಓವರ್ ನಲ್ಲಿ 19 ರನ್ ಪಡೆಯುವಲ್ಲಿ ಯಶಸ್ವಿಯಾದ ಮುಂಬೈ ತಂಡ ಕೊನೆಯ ಓವರ್‌ನಲ್ಲಿ ಟಿಮ್ ಡೇವಿಡ್ ಹಾಗೂ ಕ್ಯಾಮರೂನ್ ಗ್ರೀನ್ ಎಡವಟ್ಟಿನಿಂದಾಗಿ ಕೇವಲ 5 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಕೊನೆಗೆ ಮುಂಬೈ 5 ರನ್‌ಗಳಿಂದ ಸೋಲು ಕಂಡಿತು.
ಲಕ್ನೋ ಪರ ಬೌಲಿಂಗ್ ವಿಭಾಗದಲ್ಲಿ ರವಿ ಬಿಷ್ಣೋಯಿ, ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ 1 ವಿಕೆಟ್ ಪಡೆದರು. ಬ್ಯಾಟಿಂಗ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಜೋಡಿ 59 ಎಸೆತಗಳಲ್ಲಿ 82 ರನ್ ಗಳಿಸಿತು. ಮುಂಬೈ ಪರ ಜೇಸನ್ ಬೆಹ್ರೆನ್‌ಡ್ರೋಫ್ 30 ರನ್ ನೀಡಿ 2 ವಿಕೆಟ್ ಪಡೆದರೆ, ಪಿಯೂಷ್ ಚಾವ್ಲಾ 26 ರನ್ ನೀಡಿ 1 ವಿಕೆಟ್ ಪಡೆದರು.