ಐಪಿಎಲ್ 2023: ಐಪಿಎಲ್ ಇತಿಹಾಸದ ಬೇಡವಾದ ಕಳಪೆ ದಾಖಲೆ ಬರೆದ ಚೆನ್ನೈನ ಸ್ಟಾರ್ ಬೌಲರ್!

ಐಪಿಎಲ್ 2023ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ತುಷಾರ್ ದೇಶಪಾಂಡೆ ಐಪಿಎಲ್ ಇತಿಹಾಸದ ಬೇಡವಾದ ಕಳಪೆ ದಾಖಲೆಯೊಂದನ್ನು ಬರೆದಿದ್ದಾರೆ.
ತುಷಾರ್ ದೇಶಪಾಂಡೆ
ತುಷಾರ್ ದೇಶಪಾಂಡೆ

ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ತುಷಾರ್ ದೇಶಪಾಂಡೆ ಐಪಿಎಲ್ ಇತಿಹಾಸದ ಬೇಡವಾದ ಕಳಪೆ ದಾಖಲೆಯೊಂದನ್ನು ಬರೆದಿದ್ದಾರೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ತುಷಾರ್ ದೇಶಪಾಂಡೆ ಬರೊಬ್ಬರಿ 56 ರನ್ ಗಳನ್ನು ನೀಡುವ ಮೂಲಕ ಈ ಕಳಪೆ ದಾಖಲೆಗೆ ಪಾತ್ರರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ತುಷಾರ್ ದೇಶಪಾಂಡೆ ಒಟ್ಟು 4 ಓವರ್ ಎಸೆದು 14ರ ಸರಾಸರಿಯಲ್ಲಿ 56 ರನ್ ನೀಡಿದ್ದಾರೆ.

ಅಂತೆಯೇ ಒಂದೂ ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದರು. ಆ ಮೂಲಕ ತುಷಾರ್ ದೇಶಪಾಂಡೆ ಐಪಿಎಲ್ ಫೈನಲ್ ನಲ್ಲಿ 3ನೇ ದುಬಾರಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿಬಿಯ ಶೇನ್ ವಾಟ್ಸನ್ 61 ರನ್ ನೀಡಿದ್ದರು. ಈ ದಾಖಲೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

Most expensive bowling returns in IPL finals
0/61 - Shane Watson (RCB) vs SRH, Bengaluru, 2016
0/56 - Lockie Ferguson (KKR) vs CSK, Dubai, 2021
0/56 - Tushar Deshpande (CSK) vs GT, Ahmedabad, 2023
4/54 - Karanveer Singh (PBKS) vs KKR, Bengaluru, 2014

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com