ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ: ಭಾರತ ತಂಡ ಪ್ರಕಟ, ಸೂರ್ಯಕುಮಾರ್ ಯಾದವ್ ಗೆ ಸಾರಥ್ಯ!
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೇ ನವೆಂಬರ್ 23ರಿಂದ ಆರಂಭವಾಗಿರುವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಸ್ಫೋಟಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಗೆ ತಂಡದ ಸಾರಥ್ಯ ನೀಡಲಾಗಿದೆ.
Published: 21st November 2023 12:24 AM | Last Updated: 21st November 2023 12:24 AM | A+A A-

ಸೂರ್ಯಕುಮಾರ್ ಯಾದವ್
ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೇ ನವೆಂಬರ್ 23ರಿಂದ ಆರಂಭವಾಗಿರುವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಸ್ಫೋಟಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಗೆ ತಂಡದ ಸಾರಥ್ಯ ನೀಡಲಾಗಿದೆ.
ನವೆಂಬರ್ 23 ರಿಂದ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಗಿ ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಕೊನೆಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ -20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ವಿವಿಎಸ್ ಲಕ್ಷ್ಮಣ್ ಈ ಸರಣಿಗೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸೋಮವಾರ ಸಂಜೆ ತಂಡ ಪ್ರಕಟಿಸಲಾಗಿದ್ದು, ವಿಶ್ವಕಪ್ನಲ್ಲಿ ಆಡಿರುವ ಭಾರತ ತಂಡದ ಎಲ್ಲ ಹಿರಿಯ ಆಟಗಾರರಿಗೆ ಈ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮಹಮದ್ ಶಮಿ, ಮಹಮದ್ ಸಿರಾಜ್ ಸೇರಿದಂತೆ ತಂಡದ ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ ನಲ್ಲಿ ತಂಡದ ಬೆಂಚ್ ಸ್ಟ್ರೆಂತ್ ಆಗಿದ್ದ ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಯುವ ಆಟಗಾರರಿಗೆ ಸರಣಿಯಲ್ಲಿ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ICCಯ ವಿಶ್ವಕಪ್ ತಂಡ ಪ್ರಕಟ: ರೋಹಿತ್ ಶರ್ಮಾ ನಾಯಕ, ಕೊಹ್ಲಿ, ಶಮಿ ಸೇರಿ ತಂಡದಲ್ಲಿ 6 ಮಂದಿ ಭಾರತೀಯ ಆಟಗಾರರು!
ಏಷ್ಯನ್ ಗೇಮ್ಸ್ನ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದ ಋತುರಾಜ್ ಗಾಯಕ್ವಾಡ್ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಅದೇ ರೀತಿ ಶರೇಯಸ್ ಅಯ್ಯರ್ ಕೊನೇ ಎರಡು ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅ ಅವಧಿಯಲ್ಲಿ ಶ್ರೇಯಸ್ ಉಪನಾಯಕನ ಸ್ಥಾನ ಪಡೆದುಕೊಳ್ಳಲಿದ್ದಾರೆ.
Australia’s tour of India, 2023 | India’s squad for the T20I series against Australia announced
— ANI (@ANI) November 20, 2023
India’s squad: Suryakumar Yadav (Captain), Ruturaj Gaikwad (vice-captain), Ishan Kishan, Yashasvi Jaiswal, Tilak Varma, Rinku Singh, Jitesh Sharma (wk), Washington Sundar, Axar Patel,… pic.twitter.com/gr1w7fkixY
ವಿಶಾಖಪಟ್ಟಣಂನಲ್ಲಿ ನವೆಂಬರ್ 12ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಐರ್ಲೆಂಡ್ ಸರಣಿಯ ಬಹುಪಾಲು ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಏತನ್ಮಧ್ಯೆ, ಆ ಸರಣಿಯ ನಾಯಕ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ: ವಿಶ್ವಕಪ್ ಸೋಲು: ಮೊಹಮ್ಮದ್ ಶಮಿಯನ್ನು ತಬ್ಬಿ ಸಂತೈಸಿದ ಪ್ರಧಾನಿ ಮೋದಿ, ಫೋಟೋ ವೈರಲ್!
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.