ಏಷ್ಯಾ ಕಪ್ 2023: ನಿನ್ನೆ ಪಾಕ್, ಇಂದು ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ, ಶುಭ್ ಮನ್ ಗಿಲ್ ದಾಖಲೆ ಜೊತೆಯಾಟ
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ನಿನ್ನೆ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಶತಕದ ಜೊತೆಯಾಟವಾಡಿದ್ದ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಇಂದು ಶ್ರೀಲಂಕಾ ವಿರುದ್ಧವೂ ಅರ್ಧಶತಕದ ಜೊತೆಯಾಟ ಆಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ.
Published: 13th September 2023 01:43 AM | Last Updated: 13th September 2023 08:20 PM | A+A A-

ರೋಹಿತ್ ಶರ್ಮಾ-ಶುಭ್ ಮನ್ ಗಿಲ್ ದಾಖಲೆ
ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ನಿನ್ನೆ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಶತಕದ ಜೊತೆಯಾಟವಾಡಿದ್ದ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಇಂದು ಶ್ರೀಲಂಕಾ ವಿರುದ್ಧವೂ ಅರ್ಧಶತಕದ ಜೊತೆಯಾಟ ಆಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ.
ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ (121 ರನ್) ಶತಕದ ಜೊತೆಯಾಟವಾಡಿತ್ತು. ನಾಯಕ ರೋಹಿತ್ ಶರ್ಮಾ ಹಾಗೂ ಯುವ ಇನ್ ಫಾರ್ಮ್ ಬ್ಯಾಟರ್ ಶುಭಮನ್ ಗಿಲ್ ಅವರ ಶತಕದ ಜೊತೆಯಾಟದ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾದ ಹೆಸರಿನಲ್ಲಿದ್ದ ಮಹತ್ತರ ದಾಖಲೆಯನ್ನು ಸಮಬಲಗೊಳಿಸಿದೆ.
ಇದನ್ನೂ ಓದಿ: ಏಷ್ಯಾ ಕಪ್ 2023: ಶ್ರೀಲಂಕಾದ ಜೈತ್ರಯಾತ್ರೆಗೆ ಬ್ರೇಕ್ ಹಾಕಿದ ಭಾರತ
ಆಸಿಸ್ ದಾಖಲೆ ಪತನ
ಆಸ್ಟ್ರೇಲಿಯಾದ ಆರಂಭಿಕ ಆಟಗಾರರು ಒಡಿಐ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಬೌಲರ್ ಗಳ ಬೆವರಿಳಿಸಿ 13 ಪಂದ್ಯಗಳಲ್ಲಿ ಶತಕದ ಜೊತೆಯಾಟ ನೀಡಿದ್ದರು, ಈಗ ಆ ದಾಖಲೆಯನ್ನು ಟೀಮ್ ಇಂಡಿಯಾದ ಆಟಗಾರರು ಸರಿಗಟ್ಟಿದ್ದರು. ಇದೀಗ ಈ ಜೋಡಿ ಮತ್ತೊಂದು ದಾಖಲೆ ನಿರ್ಮಿಸಿದೆ.
ವೇಗದ 1000 ರನ್ ಜೊತೆಯಾಟ
ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸುವುದರೊಂದಿಗೆ ರೋಹಿತ್ ಮತ್ತು ಗಿಲ್ ಜೋಡಿ ಈ ಐತಿಹಾಸಿಕ ಮೈಲುಗಲ್ಲು ದಾಟಿದರು. ಬಲಗೈ ಜೋಡಿಯು ಕೇವಲ ತಮ್ಮ 13 ಇನ್ನಿಂಗ್ಸ್ ನಲ್ಲಿ ಈ ದಾಖಲೆ ನಿರ್ಮಿಸಿದೆ. ರೋಹಿತ್ ಈ ಹಿಂದೆ ಕೆಎಲ್ ರಾಹುಲ್ ಜೊತೆಯೂ ಇಂತಹುದೇ ಸಾಧನೆ ಮಾಡಿದ್ದರು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ 14 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ್ದರು.
ಇದನ್ನೂ ಓದಿ: ಏಷ್ಯಾ ಕಪ್ 2023: ಸೋಲಿನ ನಡುವೆಯೂ ಅತ್ಯಪರೂಪದ ದಾಖಲೆ ಬರೆದ ಶ್ರೀಲಂಕಾ ಆಲ್ರೌಂಡರ್
ಜನವರಿ 10, 2023 ರಂದು ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಮತ್ತು ಗಿಲ್ ಜೊಡಿ ಮೊದಲ ವಿಕೆಟ್‌ಗೆ ಮೊದಲ ಬಾರಿಗೆ 143 ರನ್‌ಗಳನ್ನು ಗಳಿಸಿದ್ದರು. ಇದಾದ ಈ ಜೋಡಿಯು ಮತ್ತೆ ಮೂರು 100-ಕ್ಕೂ ಅಧಿಕ ರನ್ ಜೊತೆಯಾಟವನ್ನು ಸೇರಿಸಿದೆ. ಈ ಏಷ್ಯಾಕಪ್ ನಲ್ಲಿ ಎರಡು ಬಾರಿ ಅಂದರೆ ನೇಪಾಳ ವಿರುದ್ಧ 147 ರನ್ ಮತ್ತು ಪಾಕಿಸ್ತಾನದ ವಿರುದ್ಧ 121 ರನ್ ಗಳ ಜೊತೆಯಾಟವಾಡಿದ್ದರು. ಆ ಮೂಲಕ ರೋಹಿತ್ ಶರ್ಮಾ ಮತ್ತು ಗಿಲ್ ಜೋಡಿ ಅತ್ಯಧಿಕ ಸರಾಸರಿ ಆರಂಭಿಕ ಜೊತೆಯಾಟದ ದಾಖಲೆಯನ್ನು ಹೊಂದಿದ್ದಾರೆ.
ಭಾರತದ ಪರ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಅಗ್ರ ಸ್ಥಾನದಲ್ಲಿದ್ದು, ಮಹಮದ್ ಅಜರುದ್ದೀನ್-ಸುನೀಲ್ ಗವಾಸ್ಕರ್ (16 ಇನ್ನಿಂಗ್ಸ್ ಗಳಲ್ಲಿ), ಸಚಿನ್ ತೆಂಡೂಲ್ಕರ್-ಅಜಯ್ ಜಡೇಜಾ (16 ಇನ್ನಿಂಗ್ಸ್ ಗಳಲ್ಲಿ), ಶಿಖರ್ ಧವನ್-ಅಜಿಂಕ್ಯಾ ರಹಾನೆ (16 ಇನ್ನಿಂಗ್ಸ್ ಗಳಲ್ಲಿ), ಎಂಎಸ್ ಧೋನಿ-ಸುರೇಶ್ ರೈನಾ (16 ಇನ್ನಿಂಗ್ಸ್ ಗಳಲ್ಲಿ) ಮತ್ತು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (16 ಇನ್ನಿಂಗ್ಸ್ ಗಳಲ್ಲಿ) ಜೊತೆಯಾಟದ ಸಾವಿರ ರನ್ ಪೂರೈಸಿದ್ದಾರೆ.
ಇದನ್ನೂ ಓದಿ: ಏಷ್ಯಾ ಕಪ್ 2023: ಶ್ರೀಲಂಕಾ ವಿರುದ್ಧ ಭರ್ಜರಿ ಬೌಲಿಂಗ್, 2 ದಾಖಲೆ ಬರೆದ ಕುಲದೀಪ್ ಯಾದವ್
ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಇದ್ದು ಈ ಜೋಡಿ 14 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿತ್ತು. ಇದು ಈ ವರೆಗಿನ ಭಾರತದ ಪರ ದಾಖಲಾಗಿದ್ದ ವೇಗದ ಸಾವಿರ ರನ್ ಜೊತೆಯಾಟವಾಗಿತ್ತು, ಆದರೆ ಇಂದು ಈ ದಾಖಲೆಯನ್ನು ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಮುರಿದಿದ್ದು, ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಕೇವಲ 13 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದೆ.
Fastest to 1000 Partnership runs for India in ODI (Innings Wise)
13 - Rohit/Gill
14 - Rohit/Rahul
14 - MS Dhoni/Gautam Gambhir
16 - Rohit/Virat Kohli
16 - Dhoni/Suresh Raina
16 - Shikhar Dhawan/Ajinkya Rahane
16 - Sachin Tendulkar/Ajay Jadeja
16 - Mohammed Azharuddin/Sunil Gavaskar