ಏಷ್ಯಾ ಕಪ್ 2023: ಪಾಕ್ ವಿರುದ್ಧ ರೋಚಕ ಜಯ, ಮೂರು ಕ್ರಿಕೆಟ್ ವಿಶ್ವದಾಖಲೆ ಬರೆದ ಶ್ರೀಲಂಕಾ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೂಪರ್ 4 ಹಂತದ ಇಂದಿನ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಶ್ರೀಲಂಕಾ ತಂಡ ಕ್ರಿಕೆಟ್ ಇತಿಹಾಸದ 3 ದಾಖಲೆಗಳನ್ನು ಬರೆದಿದೆ.
ಶ್ರೀಲಂಕಾ ದಾಖಲೆ
ಶ್ರೀಲಂಕಾ ದಾಖಲೆ

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೂಪರ್ 4 ಹಂತದ ಇಂದಿನ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಶ್ರೀಲಂಕಾ ತಂಡ ಕ್ರಿಕೆಟ್ ಇತಿಹಾಸದ 3 ದಾಖಲೆಗಳನ್ನು ಬರೆದಿದೆ.

ಹೌದು... ಇಂದು ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 2 ವಿಕೆಟ್ ವಿರೋಚಿತ ಗೆಲುವು ಸಾಧಿಸಿದ ಶ್ರೀಲಂಕಾ ಟೂರ್ನಿಯಲ್ಲಿ ಫೈನಲ್ ಗೇರಿದ್ದು ಆ ಮೂಲಕ ಏಷ್ಯಾಕರ್ ಕ್ರಿಕೆಟ್ ಇತಿಹಾಸದ 3 ಅಪರೂಪದ ದಾಖಲೆಗಳನ್ನು ನಿರ್ಮಿಸಿದೆ. 

ಕೂದಲೆಳೆ ಅಂತರದ ವಿರೋಚಿತ ಗೆಲುವು
ಏಷ್ಯಾ ಕಪ್ ಕ್ರಿಕೆಟ್ ಇತಿಹಾಸದಲ್ಲಿ ಕೂದಲೆಳೆ ಅಂತರದ ವಿರೋಚಿತ ಗೆಲುವು (ವಿಕೆಟ್ ಗಳ ಲೆಕ್ಕಾಚಾರ) ಕಂಡ ಪಂದ್ಯಗಳ ಪಟ್ಟಿಗೆ ಇಂದಿನ ಪಂದ್ಯ ಕೂಡ ಸೇರ್ಪಡೆಯಾಗಿದ್ದು, ಶ್ರೀಲಂಕಾ ತಂಡ ಕೇವಲ 2 ವಿಕೆಟ್ ಅಂತರದಲ್ಲಿ ಗೆದ್ದು ಫೈನಲ್ ಗೇರಿದೆ. ಈ ಪಂದ್ಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ 3ನೇ ರೋಚಕ ಪಂದ್ಯ ಎನಿಸಿಕೊಂಡಿದ್ದು, ಇದಕ್ಕೂ ಮೊದಲು 2014ರಲ್ಲಿ ಮೀರ್ ಪುರ್ ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 1 ವಿಕೆಟ್ ಅಂತರದಲ್ಲಿ ಜಯಿಸಿತ್ತು. ಇದೇ ಟೂರ್ನಿಯಲ್ಲಿ ಫಾತುಲ್ಲಾದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ 2 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿತ್ತು.

Closest margin of victory in ODI Asia Cup (by wickets): 
1 wicket - PAK vs IND, Mirpur 2014
2 wickets - SL vs IND, Fatullah 2014
2 wickets - SL vs PAK, Colombo 2023*

ಏಷ್ಯಾ ಕಪ್ ಇತಿಹಾಸದ 3ನೇ ಯಶಸ್ವಿ ರನ್ ಚೇಸ್ ಗೆಲುವಿನ ಪಂದ್ಯ
ಇನ್ನು ಇಂದಿನ ಪಂದ್ಯದಲ್ಲಿ ಮಳೆಯ ಅಡ್ಡಿಯ ಹೊರತಾಗಿಯೂ ಶ್ರೀಲಂಕಾ ತಂಡ ಪಾಕಿಸ್ತಾನ ನೀಡಿದ್ದ 252 ರನ್ ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದು, ಶ್ರೀಲಂಕಾ ಪಾಲಿಗೆ ಇದು ಏಷ್ಯಾ ಕಪ್ ಕ್ರಿಕೆಟ್ ಇತಿಹಾಸದ ಇತಿಹಾಸದ 3ನೇ ಯಶಸ್ವಿ ರನ್ ಚೇಸ್ ಗೆಲುವಿನ ಪಂದ್ಯವಾಗಿದೆ. ಇದಕ್ಕೂ ಮೊದಲು ಶ್ರೀಲಂಕಾ ತಂಡ 2014ರಲ್ಲಿ ಫಾತುಲ್ಲಾದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ 265 ರನ್ ಗಳನ್ನು ಚೇಸ್ ಮಾಡಿ ಗೆದ್ದು ಬೀಗಿತ್ತು. ಅದೇ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧ ಮೀರ್ ಪುರ್ ನಲ್ಲಿ 261 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. 

Highest successful chases by Sri Lanka in Asia Cup (ODIs)
265 v India, Fatullah 2014 
261 vs Pakistan, Mirpur 2014
252 vs Pakistan, Colombo (RPS) 2023* 
240 vs India, Colombo (RPS) 1997

12ನೇ ಬಾರಿಗೆ ಏಷ್ಯಾ ಕಪ್ ಫೈನಲ್ 
ಇನ್ನು ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಶ್ರೀಲಂಕಾ ಟೂರ್ನಿಯಲ್ಲಿ ಫೈನಲ್ ಗೇರಿದ್ದು, ಫೈನಲ್ ನಲ್ಲಿ ಭಾರತವನ್ನು ಎದುರಿಸಲಿದೆ. ಆ ಮೂಲಕ 12ನೇ ಬಾರಿಗೆ ಶ್ರೀಲಂಕಾ ತಂಡ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಗೇರಿದ್ದು, ಭಾರತ 10 ಬಾರಿ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ 5 ಮತ್ತು ಬಾಂಗ್ಲಾಗೇಶ 3 ಬಾರಿ ಏಷ್ಯಾಕಪ್ ಫೈನಲ್ ಆಡಿವೆ.

Most appearances in Asia Cup Finals (ODI+T20I)
12 - Sri Lanka  
10 - India  
5 - Pakistan 
3 - Bangladesh

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com