ಟಿ10 ಲೀಗ್ ನಲ್ಲಿ ಭ್ರಷ್ಟ ಚಟುವಟಿಕೆ: ಮೂವರು ಭಾರತೀಯರು ಸೇರಿ 8 ಮಂದಿ ವಿರುದ್ಧ ಐಸಿಸಿ ಆರೋಪಪಟ್ಟಿ
2021 ರ ಟಿ10 ಲೀಗ್ ನಲ್ಲಿ ಭ್ರಷ್ಟ ಚಟುವಟಿಕೆ ನಡೆಸಲಾಗಿದೆ ಎಂದು ಐಸಿಸಿ, ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಒಂದಷ್ಟು ಮಂದಿ ಭಾರತ ತಂಡಗಳ ಮಾಲಿಕರು ಸೇರಿ 8 ಮಂದಿ ವಿರುದ್ಧ ದೋಷಾರೋಪಣೆ ಹೊರಿಸಿದೆ.
Published: 20th September 2023 04:43 PM | Last Updated: 20th September 2023 06:51 PM | A+A A-

ಐಸಿಸಿ (ಸಂಗ್ರಹ ಚಿತ್ರ)
ನವದೆಹಲಿ: 2021 ರ ಟಿ10 ಲೀಗ್ ನಲ್ಲಿ ಭ್ರಷ್ಟ ಚಟುವಟಿಕೆ ನಡೆಸಲಾಗಿದೆ ಎಂದು ಐಸಿಸಿ, ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಒಂದಷ್ಟು ಮಂದಿ ಭಾರತ ತಂಡಗಳ ಮಾಲಿಕರು ಸೇರಿ 8 ಮಂದಿ ವಿರುದ್ಧ ದೋಷಾರೋಪಣೆ ಹೊರಿಸಿದೆ.
ಭಾರತತೀಯ ತಂಡಗಳ ಮಾಲಿಕರಾದ ಪರಾಗ್ ಸಂಘ್ವಿ, ಕೃಷನ್ ಕುಮಾರ್ ಚೌಧರಿ ಅವರುಗಳ ವಿರುದ್ಧವೂ ಎಮಿರೇಟ್ಸ್ ಟಿ10 ಲೀಗ್ ನ 2021 ನೇ ಆವೃತ್ತಿಯಲ್ಲಿ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪ ಹೊರಿಸಲಾಗಿದೆ.
ಇಬ್ಬರು ಭಾರತೀಯರು ಪುಣೆ ಡೆವಿಲ್ಸ್ ನ ಸಹ ಮಾಲಿಕರಾಗಿದ್ದು, ಓರ್ವ ಕ್ರೀಡಾಪಟು ಬಾಂಗ್ಲಾದೇಶದ ಮಾಜಿ ಬ್ಯಾಟ್ಸ್ಮನ್ ನಾಸಿಸ್ ಹುಸೇನ್ ವಿರುದ್ಧವೂ ಭ್ರಷ್ಟಾಚಾರ ಚಟುವಟಿಕೆಗಳ ಆರೋಪ ಕೇಳಿಬಂದಿದೆ. ಪ್ರಕರಣದ ಮೂರನೇ ಆರೋಪಿಯನ್ನಾಗಿ ಭಾರತದ ಬ್ಯಾಟಿಂಗ್ ಕೋಚ್ ಆಗಿದ್ದ ಸನ್ನಿ ಧಿಲ್ಲೋನ್ ಅವರನ್ನು ಉಲ್ಲೇಖಿಸಲಾಗಿದೆ.
"2021 ರ ಅಬುಧಾಬಿ T10 ಕ್ರಿಕೆಟ್ ಲೀಗ್‌ಗೆ ಸಂಬಂಧಿಸಿದ ಆರೋಪಗಳು ಮತ್ತು ಆ ಪಂದ್ಯಾವಳಿಯಲ್ಲಿನ ಪಂದ್ಯಗಳನ್ನು ಭ್ರಷ್ಟಗೊಳಿಸುವ ಪ್ರಯತ್ನಗಳು ನಡೆದಿದ್ದವು - ಈ ಪ್ರಯತ್ನಗಳನ್ನು ವಿಫಲಗೊಳಿಸಲಾಗಿತ್ತು.
ಟೂರ್ನಮೆಂಟ್ ನಲ್ಲಿ ಇಸಿಬಿಯ ನೀತಿ ಸಂಹಿತೆಯ ಪಾಲನೆಗಾಗಿ ಐಸಿಸಿಯನ್ನು ಭ್ರಷ್ಟಾಚಾರ ವಿರೋಧಿ ಅಧಿಕಾರಿ (ಡಿಎಸಿಒ)ಯನ್ನಾಗಿ ನೇಮಕ ಮಾಡಲಾಗಿತ್ತು ಎಂದು ಐಸಿಸಿ ಹೇಳಿದೆ.
ಮೂವರು ಭಾರತೀಯರು ಸೇರಿದಂತೆ ಆರು ಮಂದಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಆರೋಪಗಳಿಗೆ ಪ್ರತಿಕ್ರಿಯಿಸಲು ಮಂಗಳವಾರದಿಂದ 14 ದಿನಗಳ ಕಾಲಾವಕಾಶ ನೀಡಲಾಗಿದೆ.