ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್; ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್

ಶ್ರೀಲಂಕಾ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಬಿರುಗಾಳಿಯ ಶತಕ ಗಳಿಸಿದರು. ಆ ಮೂಲಕ ಮೊದಲ ಟೆಸ್ಟ್‌ನ ಪ್ಲೇಯಿಂಗ್ -11ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.
Yashasvi Jaiswal, Devdutt Padikkal
ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್
Updated on

ಶ್ರೀಲಂಕಾ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಬಿರುಗಾಳಿಯ ಶತಕ ಗಳಿಸಿದರು. ಆ ಮೂಲಕ ಮೊದಲ ಟೆಸ್ಟ್‌ನ ಪ್ಲೇಯಿಂಗ್ -11ನಲ್ಲಿ ತಮ್ಮ ಸ್ಥಾನ ಬಲಪಡಿಸಿಕೊಂಡಿದ್ದಾರೆ. ಕೊಲಂಬೊದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಪಡಿಕ್ಕಲ್ ಕೇವಲ 121 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ XI ಮೊದಲ ದಿನದಂದು 8 ವಿಕೆಟ್‌ಗಳ ನಷ್ಟಕ್ಕೆ 363 ರನ್ ಗಳಿಸಿತು. ಲಂಕಾ ಪರ ನಿಶಾನ್ ಫೆರ್ನಾಂಡೋ 65 ಎಸೆತಗಳಲ್ಲಿ 66 ರನ್ ಗಳಿಸಿದರೇ ರವೀಂದ್ರ ರಸಂತ್ 143 ಎಸೆತಗಳಲ್ಲಿ 71 ರನ್ ಗಳಿಸಿದರು. ನಾಯಕ ಸೋನಲ್ ದಿನುಷ್ 52 ರನ್ ಗಳಿಸಿದರು. ಪಸಿಂದು ಸೂರ್ಯಬಂದರ 63 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಶ್ರೀಲಂಕಾ XI ಎರಡು ವಿಕೆಟ್‌ಗಳು ಬಾಕಿ ಇರುವಾಗ 363 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

Yashasvi Jaiswal, Devdutt Padikkal
Cricket: ಶ್ರೀಲಂಕಾ ಟೆಸ್ಟ್ ಸರಣಿಯಿಂದ Sai Sudharsan ಔಟ್

ಆದಾಗ್ಯೂ, ಭಾರತದ ಆರಂಭ ಆಘಾತಕಾರಿಯಾಗಿತ್ತು. ಎರಡನೇ ದಿನದ ಶೂನ್ಯ ಗಂಟೆಯ ನಂತರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾದರು. ನಂತರ ಪಡಿಕ್ಕಲ್ ಮತ್ತು ಕೆಎಲ್ ರಾಹುಲ್ ಅವರೊಂದಿಗೆ ಪ್ರಮುಖ ಜೊತೆಯಾಟವಾಡಿದರು. ಮೂರನೇ ಕ್ರಮಾಂಕದಲ್ಲಿ ಅಜೇಯ 142 ರನ್ ಬಾರಿಸುವ ಮೂಲಕ ಪಡಿಕಲ್ ಒತ್ತಡದ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದರು.

ಇನ್ನು ಕೆಎಲ್ ರಾಹುಲ್ 67 ಎಸೆತಗಳಲ್ಲಿ 40 ರನ್ ಗಳಿಸಿದರು. ರವೀಂದ್ರ ಜಡೇಜಾ 63 ರನ್ ಗಳಿಸಿದರು. ನಂತರ ಬಂದ ರಿಷಭ್ ಪಂತ್ 2 ರನ್ ಗಳಿಗೆ ಔಟಾದರೇ ಧ್ರುವ್ ಜುರೇಲ್ 1 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಈ ವೇಳೆ ಮನವ್ ಸುತಾರ್ 41 ರನ್ ಬಾರಿಸಿ ತಂಡಕ್ಕೆ ಕೊಂಚ ಚೇತರಿಕೆ ತಂದುಕೊಟ್ಟರು. ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 357 ರನ್ ಬಾರಿಸಿದ್ದು 6 ರನ್ ಗಳ ಹಿನ್ನಡೆ ಅನುಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com