ಐದನೇ ಟೆಸ್ಟ್: ಸೋಲಿನ ಭೀತಿಯಲ್ಲೂ ಕೆಎಲ್ ರಾಹುಲ್ ಶತಕ, ಭೋಜನ ವಿರಾಮಕ್ಕೆ ಭಾರತ 167/5

Published: 11 Sep 2018 06:10 PM IST | Updated: 11 Sep 2018 06:24 PM IST
ಕೆಎಲ್ ರಾಹುಲ್
ಓವಲ್: ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಹಾಗೂ ಕಡೆಯ ಟೆಸ್ಟ್ ನಲ್ಲಿ ಭಾರತ ಸೋಲಿನ ಭೀತಿ ಎದುರಿಸುತ್ತಿದೆ. ಇದರ ನಡುವೆಯೇ ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಐದನೇ ದಿನದಾಟ ಪ್ರಾರಂಭಿಸಿದಾಗಲೇ ಬಾರತ ಮೂರು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿತ್ತು. ಇಂದು ಟೀಂ ಇಂಡಿಯಾ ಮತ್ತೆ ಎರಡು ವಿಕೆಟ್ ಕಳೆದುಕೊಂಡು ಭೋಜನ ವಿರಾಮದ ವೇಳೆಗೆ 167 ರನ್ ಕಲೆ ಹಾಕಿದೆ.

ಅಜಿಂಕ್ಯ ರಹಾನೆ (37) ಹಾಗೂ ಹನುಮ ವಿಹಾರಿ (0)  ಬಲು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲ್ಲಿಯನ್ ಗೆ ತೆರಳಿದ್ದರು ಅದರಲ್ಲಿಯೂ ಪ್ರಥಮ ಟೆಸ್ಟ್ ಆಡುತ್ತಿರುವ ವಿಹಾರಿ ಶೂನ್ಯಗಳಿಕೆ ಮಾಡಿ ನಿರಾಸೆ ಮುಡಿಸಿದ್ದಾರೆ.

ಇದೇ ವೇಳೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಿಡಿದ್ದ  ಕೆಎಲ್ ರಾಹುಲ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಐದನೇ ಶತಕ ಗಳಿಸಿದರು. ಊಟದ ವಿರಾಮದ ವೇಳೆ ರಾಹುಲ್ 107 ರನ್ ಸಂಪಾದಿಸಿದ್ದರು.

ಇದಾಗಲೇ ಸರಣಿ ಸೋಲಿನ ದವಡೆಗೆ ಸಿಕ್ಕಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಈ ಪಂದ್ಯವೂ ಕೈತಪ್ಪುವ ಭೀತಿ ಎದುರಾಗಿದೆ.
Posted by: RHN | Source: Online Desk

ಈ ವಿಭಾಗದ ಇತರ ಸುದ್ದಿ