4-1 ಅಂತರದಲ್ಲಿ ಸರಣಿ ಸೋತರೂ, ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನ ಅಬಾಧಿತ

Published: 12 Sep 2018 01:17 PM IST
ಸಂಗ್ರಹ ಚಿತ್ರ
ದುಬೈ: ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 4-1 ಅಂತರದಲ್ಲಿ ಸೋತಿದ್ದರೂ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತದ ಅಗ್ರ ಸ್ಥಾನ ಅಭಾದಿತವಾಗಿ ಮುಂದುವರೆದಿದೆ.

ನಿನ್ನೆ ಓವಲ್ ನಲ್ಲಿ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 118 ರನ್ ಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಲ್ಲಿ ಸೋತಿತು. ಇದರ ಬೆನ್ನಲ್ಲೇ ಐಸಿಸಿ ಕೂಡ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಈ ಹಿಂದೆ ಆಗ್ರ ಸ್ಥಾನದಲ್ಲಿದ್ದ ಭಾರತ ಅದೇ ಸ್ಥಾನದಲ್ಲಿ ಮುಂದುವರೆದಿದೆ. 

ಆದರೆ ಭಾರತ ತಂಡದ ರ‍್ಯಾಂಕಿಂಗ್ ಅಂಕಗಳಲ್ಲಿ ಮಾತ್ರ ಬದಲಾವಣೆಯಾಗಿದ್ದು, ಭಾರತ ಒಟ್ಟು 10 ಅಂಕಗಳನ್ನು ಕಳೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತ ಒಟ್ಟು 125 ಅಂಕಗಳನ್ನು ಹೊಂದಿತ್ತು. ಆದರೆ ಇದೀಗ ಆ ಅಂಕಗಳಿಗೆ 115ಕ್ಕೆ ಕುಸಿದಿದೆ. ಹೀಗಿದ್ದೂ ಭಾರತ ಅಗ್ರ ಸ್ಥಾನದಲ್ಲೇ ಮುಂದುವರೆದಿದೆ. 

ಇನ್ನು ಈ ಹಿಂದೆ 6ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ತನ್ನ ಖಾತೆಗೆ ಒಟ್ಟು 8 ಅಂಕಗಳನ್ನು ಹಾಕಿಕೊಂಡಿದ್ದು, 105 ಅಂಕಗಳೊಂದಿಗೆ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ. ಆದರೆ 4ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 5ನೇ ಸ್ಥಾನಕ್ಕೆ ನೂಕಲ್ಪಟ್ಟಿದೆ. ಉಳಿದಂತೆ ರ‍್ಯಾಂಕಿಂಗ್ ಪಟ್ಟಿಯಲ್ಲಿ 106 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 2ನೇ ಸ್ಥಾನದಲ್ಲಿದ್ದು, 106 ಅಂಕಗಳ ಹೊಂದಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿ ಮುಂದುವರೆದಿದೆ. 
Posted by: SVN | Source: The New Indian Express

ಈ ವಿಭಾಗದ ಇತರ ಸುದ್ದಿ